Telegram Join My Telegram   WhatsApp Join My WhatsApp

ತೆಲಂಗಾಣದಲ್ಲಿ ಭೂಕಂಪದ ಅನುಭವ:ನಿದ್ದೆಯಲ್ಲಿದ್ದ ಜನರಲ್ಲಿ ಆತಂಕ

ಭಾನುವಾರ ಮುಂಜಾನೆ ಸುಮಾರು 2.26 ಗಂಟೆಗೆ ತೆಲಂಗಾಣದ “ಭದ್ರಾದ್ರಿ ಕೊಥಗುಡೆಮ್” ಜಿಲ್ಲೆಯಲ್ಲಿ ಲಘು ಭೂಕಂಪ ಸಂಭವಿಸಿದ್ದು ಕೆಲ ಸಮಯ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ನಿದ್ದೆಯಲ್ಲಿದ್ದ ಅನೇಕರು ಗಾಬರಿಯಿಂದ ಮನೆಯಿಂದ ಆಚೆ ಬಂದಿದ್ದಾರೆ.

ಭದ್ರಾಚಲಂ,ಕೊಥಗುಡೆಮ್,ಪಾಲ್ವಂಚ,ಹಾಗೂ ಬರ್ಗಂಪಾಡು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಕಂಪನ ಸ್ಪಷ್ಟವಾಗಿ ಅನುಭವವಾಗಿದೆ.ಅಧಿಕಾರಿಗಳ ಮಾಹಿತಿಯ ಪ್ರಕಾರ, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.8 ಎಂದು ದಾಖಲಾಗಿದೆ

ಸ್ಥಳೀಯರು ಭೂಮಿ ಕೆಲ ಸೆಕೆಂಡುಗಳ ಕಾಲ ಕಂಪಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ.ಮಧ್ಯರಾತ್ರಿಯ ನಂತರ ಸಂಭವಿಸಿದ ಈ ಘಟನೆಯಿಂದ ಅನೇಕ ಕುಟುಂಬಗಳು ಸುರಕ್ಷತೆಗಾಗಿ ಮನೆಗಳ ಹೊರಗೆ ಸೇರಿದ್ದವು.

ಭೂಕಂಪದ ತೀವ್ರತೆ ಕಡಿಮೆ ಇದ್ದ ಕಾರಣ ಈ ಭೂಕಂಪದಿಂದ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

3.8 ತೀವ್ರತೆಯ ಭೂಕಂಪ ಸಾಮಾನ್ಯವಾಗಿ ಮಧ್ಯಮ ಮಟ್ಟದ ಕಂಪನವಾಗಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಗಂಭೀರ ಹಾನಿ ಉಂಟುಮಾಡುವುದಿಲ್ಲ. ಆದರೆ ಜನರು ಭೂಕಂಪದಂತಹ ಪ್ರಕೃತಿ ವಿಕೋಪಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವುದು ಅಗತ್ಯ ಎಂದೂ ತಜ್ಞರು ತಿಳಿಸಿದ್ದಾರೆ.

3.8 ತೀವ್ರತೆಯ ಭೂಕಂಪ ಎಷ್ಟು ಅಪಾಯಕಾರಿ?

ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪವನ್ನು ಸಾಮಾನ್ಯವಾಗಿ ಲಘು ಭೂಕಂಪ ಎಂದು ಪರಿಗಣಿಸಲಾಗುತ್ತದೆ.ಇಂತಹ ಭೂಕಂಪಗಳು ಹೆಚ್ಚಿನ ಸಂದರ್ಭಗಳಲ್ಲಿ ದೊಡ್ಡ ಹಾನಿಯನ್ನು ಉಂಟುಮಾಡುವುದಿಲ್ಲ.ಆದರೆ ಭೂಕಂಪದ ಕೇಂದ್ರಬಿಂದುವಿನ ಸಮೀಪವಿರುವ ಜನರು ಕಂಪನವನ್ನು ಸ್ಪಷ್ಟವಾಗಿ ಅನುಭವಿಸಬಹುದು.

Leave a Comment