Telegram Join My Telegram   WhatsApp Join My WhatsApp

obsession movie ಕಡಿಮೆ ಬಜೆಟ್, ಭಾರಿ ಕಲೆಕ್ಷನ್ ಹಾಲಿವುಡ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ

ಯೂಟ್ಯೂಬ್‌ನಿಂದ ಹಾಲಿವುಡ್‌ವರೆಗೆ: 26 ವರ್ಷದ ಕರಿ ಬಾರ್ಕರ್ ಸೃಷ್ಟಿಸಿದ ಸಂಚಲನವೇ ‘ಒಬ್ಸೆಷನ್’

ಸೂಪರ್ ನ್ಯಾಚುರಲ್ ಸೈಕಾಲಜಿ ಹಾರರ್ ಸಿನಿಮಾ ಈಗ ಹಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ ‘ಒಬ್ಸೆಷನ್’ ಮೂವಿಯು ಕೇವಲ ಸಿನಿಪ್ರೇಕ್ಷಕರನ್ನಲ್ಲದೆ ವಿಮರ್ಶ ಕರನ್ನು ಕೂಡ ಅಚ್ಚರಿಗೊಳಿಸಿದೆ

ಕೇವಲ 26 ವರ್ಷದ ಕರಿ ಬಾರ್ಕರ್ ಇಂದು ಹಾಲಿವುಡ್‌ನ ಅತ್ಯಂತ ಭರವಸೆಯ ಯುವ ನಿರ್ದೇಶಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವುದು.ಈ ಚಿತ್ರದ ಮತ್ತೊಂದು ವಿಶೇಷವಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್

ಅಮೆರಿಕಾದಲ್ಲೇ 152.1 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಗಳಿಕೆ ದಾಖಲಿಸಿರುವ ಈ ಸಿನಿಮಾ, ವಿದೇಶಿ ಮಾರುಕಟ್ಟೆಗಳಲ್ಲೂ ಭರ್ಜರಿ ಪ್ರತಿಕ್ರಿಯೆ ಪಡೆಯುವುದಲ್ಲದೆ ಕಡಿಮೆ ಬಜೆಟ್ ನಲ್ಲಿ ಸಿನಿಮಾ ಚಿತ್ರಿಸಲಾಗಿದ್ದು ಅಸಾಧಾರಣ ಗಳಿಕೆಯನ್ನು ಕಂಡಿರುವುದು ಚಿತ್ರ ಪ್ರೇಮಿಗಳಲ್ಲಿ ಬಹು ಆಶ್ಚರ್ಯವನ್ನುಂಟು ಮಾಡಿದೆ

57 ದೇಶಗಳಲ್ಲಿ ಸುಮಾರು 6,825 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಜಾಗತಿಕ ಮಟ್ಟದಲ್ಲಿ ದೊಡ್ಡ ಆದಾಯ ಗಳಿಸುತ್ತಿದೆ.

ಯೂಟ್ಯೂಬ್‌ನಿಂದ ಆರಂಭವಾದ ಪಯಣ

ಕರಿ ಬಾರ್ಕರ್ ಅವರು ತಮ್ಮ ಸ್ನೇಹಿತ ಕೂಪರ್ ಟಾಮ್ಲಿನ್ಸನ್ ಜೊತೆ ಸೇರಿ ‘That’s A Bad Idea’ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು.ಅಲ್ಲಿ ಹಾರರ್ ವಿಡಿಯೋಗಳು, ಕಿರುಚಿತ್ರಗಳು ಮತ್ತು ವಿಭಿನ್ನ ಕಥೆಗಳನ್ನು ನಿರ್ಮಿಸುತ್ತಾ ಸಿನಿಮಾ ಕ್ಷೇತ್ರದ ಅನುಭವವನ್ನು ಪಡೆದುಕೊಂಡರು. ಯಾವುದೇ ಸ್ಟಾರ್ ನಟ ಇಲ್ಲದಿದ್ದರೂ ದೊಡ್ಡ ಬ್ಯಾನರ್ ಇಲ್ಲದಿದ್ದರೂ ಸಿಂಪಲ್ ಕಥೆಯನ್ನು ಇಟ್ಟುಕೊಂಡು ಈ ಚಿತ್ರವನ್ನು ತಮ್ಮದೇ ಆದ ರೀತಿಯಲ್ಲಿ ಸಿನಿ ಪ್ರೇಕ್ಷಕರನ್ನು ಅದ್ಭುತವಾಗಿ ಸೆಳೆಯುವಂತೆ ಈ ಚಿತ್ರದ ಸನ್ನಿವೇಶಗಳು ದೃಶ್ಯಗಳನ್ನು ತುಂಬಾ ಅದ್ಭುತವಾಗಿ ಚಿತ್ರಿಸಿದ್ದಾರೆ.

ಸಿನಿಮಾದ ಕಲೆಕ್ಷನ್ 

Movie budget: 7ಕೋಟಿ (indian rupee)

Collection:1700+

ಭಾರತದಲ್ಲಿ ಸುಮಾರು 13 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.Inde Navarrette. Michael Johnston ಈ ಸಿನಿಮಾದ ಮುಖ್ಯ ಪಾತ್ರಗಳಾಗಿ ಅಭಿನಯಿಸಿದ್ದಾರೆ

ಯಾವುದೇ ಒಂದು ಸಿನಿಮಾ ಹೈಕಲೆಕ್ಷನ್ ಮಾಡಬೇಕಾದರೆ ಹೈ ಬಜೆಟ್ ಸಿನಿಮಾ ಮಾಡಲೇಬೇಕೆಂದೇನಿಲ್ಲ ಒಳ್ಳೆ ಸಿನಿಮಾ ವನ್ನು ಜನ ಎಂದು ಕೈಬಿಡುವುದಿಲ್ಲ ಎಂಬುದನ್ನು ಈ ಸಿನಿಮಾ ತೋರಿಸಿಕೊಟ್ಟಿದೆ

Leave a Comment