Telegram Join My Telegram   WhatsApp Join My WhatsApp

ಕರ್ನಾಟಕದಲ್ಲಿ ಲಾಟರಿ ಟಿಕೆಟ್‌ಗಳನ್ನು ಯಾಕೆ ಬ್ಯಾನ್ ಮಾಡಲಾಯಿತು

“Lottery Free Zone” ಎಂಬಾ ಘೋಷಣೆ ಮೂಲಕ 2007 ರಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಲಾಟರಿ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಯಿತು.

ಸರ್ಕಾರ ಲಾಟರಿ ಟಿಕೆಟ್‌ಗಳನ್ನೂ ನಿಷೇಧ ಮಾಡಲು ಸಾಮಾಜಿಕ ಸಮಸ್ಯೆಗಳು, ಜನರ ಆರ್ಥಿಕ ಸ್ಥಿತಿ ಕಾರಣವಾಯ್ತ ನೋಡೋಣ.

2007ಕ್ಕೂ ಮೊದಲು ಕರ್ನಾಟಕದಲ್ಲಿ ಲಾಟರಿ ಹೇಗಿತ್ತು?

ಕೆಲವರು ಅದೃಷ್ಟ ಪರೀಕ್ಷೆಗಾಗಿ ಮನರಂಜನೆಗಾಗಿ ಲಾಟರಿ ticket ಖರೀದಿಸುತ್ತಿದ್ದರು. ಕರ್ನಾಟಕದಲ್ಲಿ ಬೇರೆ ಬೇರೆ ರಾಜ್ಯಗಳ ಲಾಟರಿ ಟಿಕೆಟ್‌ಗಳ ಮಾರಾಟ ನಡೆಯುತ್ತಿತ್ತು. ಸಾಮಾನ್ಯವಾಗಿ ಸಣ್ಣ ಮೊತ್ತದ ಟಿಕೆಟ್‌ಗಳನ್ನು ಖರೀದಿಸಿ ದೊಡ್ಡ ಬಹುಮಾನ ಗೆಲ್ಲುವ ಅವಕಾಶವನ್ನು ಜನರಿಗೆ ನೀಡಲಾಗುತ್ತಿತ್ತು.ಆದರೆ ಮತ್ತೊಂದು ಕಡೆ ಕಡಿಮೆ ಆದಾಯ ಹೊಂದಿರುವ ಜನರು ಕೂಡ ದೊಡ್ಡ ಬಹುಮಾನದ ನಿರೀಕ್ಷೆಯಲ್ಲಿ ಅತಿಯಾದ ಹಣ ಖರ್ಚು ಮಾಡುತ್ತಿರುವ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿತ್ತು.

ಲಾಟರಿಯನ್ನು ಯಾಕೆ ವಿರೋಧಿಸಿತು?

ಲಾಟರಿಯಲ್ಲಿ ದೊಡ್ಡ ಬಹುಮಾನ ಗೆಲ್ಲುವ ಆಸೆಯಿಂದ ಜನರು ಪದೇಪದೇ ಟಿಕೆಟ್ ಖರೀದಿಸುವ ಸಾಧ್ಯತೆ ಇರುತ್ತದೆ. ಇದರಿಂದ ಕುಟುಂಬದ ಆದಾಯದ ಒಂದು ಭಾಗ ಅನಗತ್ಯವಾಗಿ ಖರ್ಚಾಗಬಹುದು ಎಂಬ ಆತಂಕ ಸರ್ಕಾರಕ್ಕೆ ಇತ್ತು.ಇಂತಹ ಖರ್ಚು ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಹೆಚ್ಚು ಪರಿಣಾಮ ಬೀರಬಹುದು ಎಂದೂ ಸರ್ಕಾರ ಯೋಚಿಸಿತ್ತು.ಜನರ ಸಾಮಾಜಿಕ ಮತ್ತು ಆರ್ಥಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ lottary ticket ban ಮಾಡಿತು

ಲಾಟರಿ ಏಜೆಂಟ್‌ಗಳ ಮೇಲೆ ಪರಿಣಾಮ 

ಲಾಟರಿ ಮಾರಾಟದಿಂದ ಜೀವನ ನಡೆಸುತ್ತಿದ್ದ ಏಜೆಂಟ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೂ ನಿಷೇಧದ ಪರಿಣಾಮ ಬೀರಿತು.

ಲಾಟರಿ ಮಾರಾಟ ನಿಂತ ನಂತರ ಈ ಉದ್ಯಮಕ್ಕೆ ಸಂಬಂಧಿಸಿದ ಅನೇಕ ಜನರು ತಮ್ಮ ಆದಾಯದ ಮೂಲವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸಬಹುದಾಗಿತ್ತು.

ಕರ್ನಾಟಕದಲ್ಲಿ ಲಾಟರಿ ನಿಷೇಧ ಎಂದರೆ ಏನು?

ಇಲ್ಲಿ ಒಂದು ಪ್ರಮುಖ ವಿಷಯ ಗಮನಿಸಬೇಕು.ಕರ್ನಾಟಕದಲ್ಲಿ ಲಾಟರಿ ಟಿಕೆಟ್ ಮಾರಾಟ ನಿಷೇಧಿಸಲಾಗಿದೆ ಎಂದರೆ, ಕರ್ನಾಟಕದ ಹೊರಗೆ ನಡೆಯುವ ಪ್ರತಿಯೊಂದು ಲಾಟರಿಯೂ ಕಾನೂನುಬಾಹಿರ ಎಂಬ ಅರ್ಥವಲ್ಲ.

ಬೇರೆ ರಾಜ್ಯಗಳಲ್ಲಿ ಸರ್ಕಾರದಿಂದ ಅನುಮತಿ ಪಡೆದ ಲಾಟರಿ ವ್ಯವಸ್ಥೆಗಳು ಇರಬಹುದು. ಆದರೆ ಕರ್ನಾಟಕ ರಾಜ್ಯದೊಳಗೆ ಅಂತಹ ಲಾಟರಿ ಟಿಕೆಟ್‌ಗಳ ಮಾರಾಟಕ್ಕೆ ರಾಜ್ಯದ ನಿಷೇಧ ಅನ್ವಯಿಸುತ್ತದೆ.

ಈಗಲೂ ಲಾಟರಿ ಟಿಕೆಟ್ ಸಿಗುತ್ತದೆಯೇ?

ಕೇರಳ ಸಿಕ್ಕಿಂ ನಾಗಾಲ್ಯಾಂಡ ಗೋವ ಮಹಾರಾಷ್ಟ್ರ ಪಂಜಾಬ್ ಪಶ್ಚಿಮ ಬಂಗಾಳ ಮಿಜೋರಾಂ ಅರುಣಾಚಲ ಪ್ರದೇಶ ಮೇಘಾಲಯ ಅಸ್ಸಾಂ ಮಣಿಪುರ ಮಧ್ಯಪ್ರದೇಶ ರಾಜ್ಯಗಳಲ್ಲಿ ಇನ್ನೂ lottary ticket ಮಾರಾಟವಾಗುತ್ತಿವೆ

ಕರ್ನಾಟಕದಲ್ಲಿ ಲಾಟರಿ ನಿಷೇಧ ಎಂದರೆ ಏನು?

ಕರ್ನಾಟಕದ ಲಾಟರಿ ನಿಷೇಧವು ಒಂದು ದಿನದಲ್ಲಿ ತೆಗೆದುಕೊಂಡ ನಿರ್ಧಾರವಲ್ಲ. 2007ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ನೀತಿ ನಂತರ ಸರ್ಕಾರದ ಅಧಿಸೂಚನೆಯ ಮೂಲಕ ಜಾರಿಗೆ ಬಂತು. ನಂತರ ಈ ನಿರ್ಧಾರವನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಲಾಯಿತು.

ಹೀಗಾಗಿ “ಕರ್ನಾಟಕದಲ್ಲಿ ಲಾಟರಿ ಯಾಕೆ ಬ್ಯಾನ್ ಆಯಿತು?” ಎಂಬ ಪ್ರಶ್ನೆಗೆ ಸರಳ ಉತ್ತರವೆಂದರೆ — ಜನರ ಸಾಮಾಜಿಕ ಮತ್ತು ಆರ್ಥಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಲಾಟರಿ ಮಾರಾಟವನ್ನು ನಿಷೇಧಿಸಿ ರಾಜ್ಯವನ್ನು ಲಾಟರಿ ಮುಕ್ತ ಪ್ರದೇಶವನ್ನಾಗಿ ಮಾಡಲು ನಿರ್ಧರಿಸಿತು.

Leave a Comment