Telegram Join My Telegram   WhatsApp Join My WhatsApp

ಹೆಚ್ಚು ನಿದ್ರೆ ಆರೋಗ್ಯಕ್ಕೆ ಒಳ್ಳೆಯದೇ?ಅತಿಯಾದ ನಿದ್ರೆ ನಿಮ್ಮ ದೇಹಕ್ಕೆ ಏನು ಮಾಡುತ್ತದೆ?

ದಿನಕ್ಕೆ 8 ಗಂಟೆಗಿಂತ ಹೆಚ್ಚು ನಿದ್ರೆ ಮಾಡಿದರೆ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ? ತೂಕ ಹೆಚ್ಚಳ, ತಲೆನೋವು, ಹೃದಯ ಸಮಸ್ಯೆಗಳವರೆಗೆ ಅತಿಯಾದ ನಿದ್ರೆಯ ಅಪಾಯಗಳ ಬಗ್ಗೆ ತಿಳಿಯಿರಿ.

ಸಾಮಾನ್ಯವಾಗಿ ವಯಸ್ಕರಿಗೆ ದಿನಕ್ಕೆ 7 ರಿಂದ 9 ಗಂಟೆಗಳ ನಿದ್ರೆ ಸಾಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆದರೆ ಕೆಲವರು 10 ರಿಂದ 12 ಗಂಟೆಗಳವರೆಗೆ ನಿದ್ರೆ ಮಾಡುವುದು ಸಾಮಾನ್ಯ. ಹೀಗಾದರೆ ಅತಿಯಾದ ನಿದ್ರೆ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಅಪಾಯಕಾರಿಯೇ

ತಲೆನೋವು ಮತ್ತು ತಲೆಭಾರ

ಮೆದುಳಿನ ರಾಸಾಯನಿಕ ಸಮತೋಲನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಅತಿಯಾದ ನಿದ್ದೆ ತಲೆ ಬಾರಕ್ಕೆ ಮತ್ತು ತಲೆ ನೋವಿಗೆ ಕಾರಣವಾಗಬಹುದು

ತೂಕ ಹೆಚ್ಚಳದ ಅಪಾಯ

ನಿದ್ದೆ ಮಾಡುವಾಗ ಯಾವುದೇ ದೈಹಿಕ ಚಟುವಟಿಕೆಗಳು ನಡೆಯದ ಕಾರಣ ದೇಹದಲ್ಲಿ ಕ್ಯಾಲೊರಿಗಳು ಸರಿಯಾಗಿ ಖರ್ಚಾಗದೆ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ತೂಕ ಹೆಚ್ಚಾಗಬಹುದು

ಹೃದಯದ ಆರೋಗ್ಯದ ಮೇಲೆ ಪರಿಣಾಮ

ಕೆಲವು ಅಧ್ಯಯನಗಳ ಪ್ರಕಾರ, ನಿರಂತರವಾಗಿ ಹೆಚ್ಚು ನಿದ್ರೆ ಮಾಡುವವರಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ.

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

ಕೆಲವೊಮ್ಮೆ ಖಿನ್ನತೆ (Depression) ಅಥವಾ ಆತಂಕದಂತಹ ಮಾನಸಿಕ ಸಮಸ್ಯೆಗಳ ಲಕ್ಷಣವಾಗಿರಬಹುದು. ಆದ್ದರಿಂದ ಅತಿಯಾದ ನಿದ್ರೆ ನಿರ್ಲಕ್ಷಿಸಬಾರದು.

ದೇಹದಲ್ಲಿ ಸೋಮಾರಿತನ ಹೆಚ್ಚಾಗಬಹುದು

ಹೆಚ್ಚು ಹೊತ್ತು ನಿದ್ರೆ ಮಾಡಿದ ನಂತರ ದೇಹ ಚುರುಕಾಗುವುದಕ್ಕಿಂತಲೂ ಹೆಚ್ಚು ಆಯಾಸವಾಗಿರುವ ಅನುಭವವಾಗಬಹುದು. ಇದರಿಂದ ದಿನವಿಡೀ ಕೆಲಸದಲ್ಲಿ ಗಮನ ಕಡಿಮೆಯಾಗಬಹುದು.

ಹೆಚ್ಚು ನಿದ್ರೆ ಮಾಡಲು ಕಾರಣಗಳೇನು?

ಕೆಲವೊಮ್ಮೆ ದೇಹದಲ್ಲಿರುವ ಕೆಲವು ಆರೋಗ್ಯ ಸಮಸ್ಯೆಗಳು ಅಥವಾ ಜೀವನಶೈಲಿಯ ಕಾರಣಗಳಿಂದಲೂ ಇದು ಸಂಭವಿಸಬಹುದು.

ದೈಹಿಕ ಆಯಾಸ

ಮಾನಸಿಕ ಒತ್ತಡ ಮತ್ತು ಖಿನ್ನತೆ

ನಿದ್ರೆಯ ಗುಣಮಟ್ಟ ಕಡಿಮೆಯಾಗಿರುವುದು

ಕೆಲವು ಔಷಧಿಗಳ ಅಡ್ಡಪರಿಣಾಮಗಳು

ಹೆಚ್ಚು ನಿದ್ರೆಯಿಂದ ಮೆದುಳಿನ ಮೇಲೆ ಏನು ಪರಿಣಾಮ?

ಕೆಲವು ಜನರಲ್ಲಿ ಗಮನ ಕೇಂದ್ರೀಕರಿಸುವ ಸಾಮರ್ಥ್ಯ ಕಡಿಮೆಯಾಗಬಹುದು. ಕೆಲಸ, ಓದು ಅಥವಾ ದಿನನಿತ್ಯದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗುವ ಸಾಧ್ಯತೆಯೂ ಇದೆ.

ನಿದ್ರೆ ಆರೋಗ್ಯಕರ ಜೀವನದ ಪ್ರಮುಖ ಭಾಗ. ಆದರೆ ಯಾವುದೇ ವಿಷಯದಂತೆ ನಿದ್ರೆಯಲ್ಲಿಯೂ ಸಮತೋಲನ ಮುಖ್ಯ. ಕಡಿಮೆ ನಿದ್ರೆ ಹೇಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆಯೋ, ಅತಿಯಾದ ನಿದ್ರೆಯೂ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

Leave a Comment