Telegram Join My Telegram   WhatsApp Join My WhatsApp

ಮುಖದ ಮೊಡವೆಗಳಿಂದ ಬೇಸತ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ

ಧೂಳು ಮಾಲಿನ್ಯ ಹಾರ್ಮೋನ್ ಬದಲಾವಣೆಗಳಂತಹ ಅನೇಕ ಕಾರಣಗಳಿಂದ ತುಂಬಾ ಜನ ಮೊಡವೆಗಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕಾಗಿ ದುಬಾರಿ ಕ್ರೀಮ್ ಗಳು ಹಲವು ಮನೆಮದ್ದುಗಳು ಬಳಸಿದರು ಮೊಡವೆಗಳು ದೂರವಾಗದಿರಬಹುದು ಆದರೆ ಈ ಸಿಂಪಲ್ ಮನೆ ಮದ್ದು ಮೊಡವೆಗಳಿಗೆ ಪರಿಹಾರವಾಗಬಹುದು

ಹಲವು ನೈಸರ್ಗಿಕ ಗುಣಗಳನ್ನು ಒಳಗೊಂಡಿರುವ ಅಲೋವೆರಾ ಚರ್ಮದ ಉರಿಯೂತವನ್ನು ಕಡಿಮೆ ಮಾಡುವ ಮತ್ತು ಶಾಂತಗೊಳಿಸುತ್ತದೆ.

ಅಲೋವೆರಾ ಬಳಸುವ ಸರಿಯಾದ ವಿಧಾನ

ಮುಖವನ್ನು ಸ್ವಚ್ಛವಾಗಿ ತೊಳೆದು ಒಣಗಿಸಿಕೊಳ್ಳಿ.ನಂತರ ತಾಜಾ ಅಲೋವೆರಾ ಎಲೆಯಿಂದ ಜೆಲ್ ತೆಗೆದುಕೊಳ್ಳಿ.ಅಲೋವೆರಾ ಜೆಲ್ ಅನ್ನು ಮೊಡವೆ ಇರುವ ಭಾಗಕ್ಕೆ ಸವರಿ.15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ.ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಇದನ್ನು ವಾರಕ್ಕೆ ಮೂರರಿಂದ ನಾಲ್ಕು ದಿನ ಮಾಡುವುದರಿಂದ ಮುಖದ ಮೊಡವೆಗಳು ಕಡಿಮೆಯಾಗಬಹುದು

ಗಮನಿಸಬೇಕಾದ ವಿಷಯ

ಎಲ್ಲರ ಚರ್ಮಕ್ಕೆ ಒಂದೇ ರೀತಿಯಲ್ಲಿ ಅಲೋವೆರಾ ಪರಿಣಾಮ ನೀಡುವುದಿಲ್ಲ.ಮೊದಲು ಚರ್ಮದ ಸಣ್ಣ ಭಾಗದಲ್ಲಿ ಪರೀಕ್ಷಿಸಿ ಬಳಸುವುದು ಉತ್ತಮ

ಮೊಡವೆ ಹೆಚ್ಚಾಗಲು ಕಾರಣಗಳೇನು?

ಎಣ್ಣೆ ಪದಾರ್ಥಗಳ ಅತಿಯಾದ ಸೇವನೆ

ಹಾರ್ಮೋನ್ ಬದಲಾವಣೆ

ನಿದ್ರೆಯ ಕೊರತೆ

ಮಾನಸಿಕ ಒತ್ತಡ

ಧೂಳಿನಲ್ಲಿ ಹೆಚ್ಚಾಗಿರುವುದು

ಇತರ ಸಲಹೆಗಳು

ಕೆಲವೊಮ್ಮೆ ನಮ್ಮ ದೈನಂದಿನ ಅಭ್ಯಾಸಗಳೇ ಮೊಡವೆಗಳಿಗೆ ಕಾರಣವಾಗುತ್ತವೆ.ಸರಿಯಾದ ಆರೈಕೆಯಿಂದ ಅವುಗಳನ್ನು ನಿಯಂತ್ರಿಸಬಹುದು.ಕೆಲವು ಸರಳ ಮತ್ತು ಪರಿಣಾಮಕಾರಿ ಸಲಹೆಗಳು.

ದಿನಕ್ಕೆ ಎರಡು ಬಾರಿ ಮುಖ ತೊಳೆಯಿರಿ

ಸಾಕಷ್ಟು ನೀರು ಕುಡಿಯಿರಿ

ಜಂಕ್ ಫುಡ್ ಮತ್ತು ಅತಿಯಾದ ಎಣ್ಣೆಯುಕ್ತ ಆಹಾರ ಸೇವನೆಯನ್ನು ನಿಯಂತ್ರಿಸಿ

ಸಾಕಷ್ಟು ನಿದ್ರೆ ಪಡೆಯಿರಿ

ಹೆಚ್ಚು ಸಕ್ಕರೆ ಸೇವನೆ ತಪ್ಪಿಸಿ

ನಿಯಮಿತ ವ್ಯಾಯಾಮ ಮಾಡಿ

ಆರೋಗ್ಯಕರ ಆಹಾರ ಸೇವಿಸಿ

Leave a Comment