Telegram Join My Telegram   WhatsApp Join My WhatsApp

T20 ವಿಶ್ವಕಪ್ 2026 ಭಾರತ-ಪಾಕಿಸ್ತಾನ ಮಹಿಳಾ ಮಹಾಸಮರ

ಭಾರತ ಮಹಿಳಾ ತಂಡ ಇಂದು ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.ಟಿ20 ವಿಶ್ವಕಪ್ 2026ರ ಆರಂಭಿಕ ಹಂತದಲ್ಲೇ ಅಭಿಮಾನಿಗಳಿಗೆ ರೋಚಕ ಪಂದ್ಯ ಸಿಗಲಿದೆ.ಇದುವರೆಗೆ ನಡೆದ ಪಂದ್ಯಗಳಲ್ಲಿ 13 ಗೆಲುವುಗಳನ್ನು ದಾಖಲಿಸಿದ್ದು ಭಾರತ ತಂಡ ಪಾಕಿಸ್ತಾನದ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದೆ.

ಪಂದ್ಯದ ವಿವರ

ಸಮಯ: ಸಂಜೆ 7:00 ಗಂಟೆ

ನೇರ ಪ್ರಸಾರ: Star Sports Network

ದಿನಾಂಕ: ಜೂನ್ 14, 2026

ಲೈವ್ ಸ್ಟ್ರೀಮಿಂಗ್: JioHotstar

ಇದನ್ನು ಓದಿ:ಮುಖದ ಮೊಡವೆಗಳಿಂದ ಬೇಸತ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ

ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆ

ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಆರಂಭಿಕ ಓವರ್‌ಗಳಿಂದಲೇ ದಾಳಿಗಿಳಿಯುವ ಸಾಮರ್ಥ್ಯ ಹೊಂದಿದ್ದಾರೆ.ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರೊಡ್ರಿಗಸ್ ಮತ್ತು ರಿಚಾ ಘೋಷ್ ತಂಡಕ್ಕೆ ಭರವಸೆಯಾಗಿ ನಿಂತಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿಈ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡಿದರೆ ಭಾರತ ದೊಡ್ಡ ಮೊತ್ತ ಪೇರಿಸುವ ಸಾಧ್ಯತೆ ಹೆಚ್ಚಿದೆ

ಬೌಲಿಂಗ್‌ನಲ್ಲಿ ಭಾರತದ ಶಕ್ತಿ

ಸ್ಪಿನ್ ಹಾಗೂ ವೈವಿಧ್ಯಮಯ ದಾಳಿಯಿಂದ ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್ ಹಾಗೂ ನಂದಿನಿ ಶರ್ಮಾ ನೇತೃತ್ವದ ಬೌಲಿಂಗ್ ಪಡೆ ಎದುರಾಳಿ ಬ್ಯಾಟರ್‌ಗಳಿಗೆ ಕಠಿಣ ಸವಾಲಾಗಬಹುದು.

ಫಾತಿಮಾ ಸನಾ ಮೇಲೆ ಪಾಕಿಸ್ತಾನದ ಭರವಸೆ

ಕಳೆದ ಒಂದು ವರ್ಷದಲ್ಲಿ ಬ್ಯಾಟ್ ಹಾಗೂ ಬೌಲಿಂಗ್ ಎರಡರಲ್ಲೂ ಪರಿಣಾಮಕಾರಿ ಪ್ರದರ್ಶನ ನೀಡಿರುವ ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿದ್ದಾರೆ.ಇತ್ತೀಚೆಗೆ ಜಿಂಬಾಬ್ವೆ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಗಮನ ಸೆಳೆಯುವ ಮೂಲಕ. ತಂಡದ ಪ್ರಮುಖಾಸ್ತ್ರವಾಗಿದ್ದಾರೆ

ಎಡ್ಜ್‌ಬಾಸ್ಟನ್ ಪಿಚ್ ವರದಿ

ಎಡ್ಜ್‌ಬಾಸ್ಟನ್ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಆರಂಭಿಕ ಓವರ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ಸ್ವಲ್ಪ ನೆರವು ದೊರೆಯಬಹುದು. ಆದರೆ ಪಂದ್ಯ ಮುಂದುವರಿದಂತೆ ಪಿಚ್ ನಿಧಾನಗೊಳ್ಳುವ ಸಾಧ್ಯತೆ ಇರುವುದರಿಂದ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಬಹುದು.

ಇದರಿಂದಾಗಿ ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಪಾಕಿಸ್ತಾನ ಸಂಭಾವ್ಯ ಇಲೆವೆನ್

ಫಾತಿಮಾ ಸನಾ (ನಾಯಕಿ), ಮುನೀಬಾ ಅಲಿ, ಗುಲ್ ಫಿರೋಜಾ, ಆಯೆಶಾ ಜಾಫರ್, ಅಲಿಯಾ ರಿಯಾಜ್, ಇರಾಮ್ ಜಾವೇದ್, ನತಾಲಿಯಾ ಪರ್ವೈಜ್, ತುಬಾ ಹಸನ್, ದೈನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.

ಭಾರತ ಸಂಭಾವ್ಯ ಇಲೆವೆನ್

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಜೆಮಿಮಾ ರೊಡ್ರಿಗಸ್, ರಿಚಾ ಘೋಷ್, ದೀಪ್ತಿ ಶರ್ಮಾ, ಭಾರ್ತಿ ಫುಲ್ಮಾಲಿ, ಶ್ರೇಯಾಂಕಾ ಪಾಟೀಲ್, ಕ್ರಾಂತಿ ಗೌಡ್, ನಂದಿನಿ ಶರ್ಮಾ.

ಇಂದು ಸಂಜೆ ನಡೆಯಲಿರುವ ಈ ಮಹಾಸಮರದಲ್ಲಿ ಯಾರು ವಿಜಯದ ನಗೆ ಬೀರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ಯಾವುದೇ ಕ್ಷಣದಲ್ಲಿ ಆಟದ ದಿಕ್ಕು ಬದಲಾಗುವ ಸಾಧ್ಯತೆ ಇರುವುದರಿಂದ ಅಭಿಮಾನಿಗಳಿಗೆ ರೋಚಕ ಹೋರಾಟ ಖಚಿತ.

Leave a Comment