Telegram Join My Telegram   WhatsApp Join My WhatsApp

IPL 2026 Final RCB vs GT – ಕಪ್ ಗೆಲ್ಲೋದು ಯಾರು?

IPL 2026 ಫೈನಲ್‌ನಲ್ಲಿ Royal Challengers Bengaluru ಮತ್ತು Gujarat Titans ಮುಖಾಮುಖಿ. ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಸೇರಿದಂತೆ ಸ್ಟಾರ್ ಆಟಗಾರರ ಪೈಪೋಟಿ. ಕಪ್ ಯಾರ ಮುಡಿಗೆ ಏರಲಿದೆ

ಸತತ ಎರಡನೇ ಬಾರಿ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದಿರುವ ಬೆಂಗಳೂರು ತಂಡದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಇನ್ನೊಂದೆಡೆ, ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಮ್ಮ ಎರಡನೇ IPL ಪ್ರಶಸ್ತಿಗಾಗಿ ಹೋರಾಟ ನಡೆಸುತ್ತಿದೆ.

ಈ ಸಲ ಕಪ್ ನಮ್ದು ಅಂತಾರ ನಮ್ಮ RCB ತಂಡ?

ಸತತ ಸೋಲಿನ ನಂತರ ನಮ್ಮ rcb ತಂಡವು ಕಳೆದ ವರ್ಷ ಕಪ್ ಗೆಲ್ಲುವ ಮೂಲಕ ಕ್ರಿಕೆಟ್ ಲೋಕದ ಹಿತಿಹಾಸಕ್ಕೆ ಕಾರಣ ವಾಗಿತ್ತು ಈ ಬಾರಿಯೂ rcb 2 ನೇ ಬಾರಿ ಕಪ್ಪನ್ನು ಗೆಲ್ಲುವತ್ತ ಮುನ್ನುಗ್ಗುತ್ತಿದೆ

ಫೈನಲ್‌ಗಾಗಿ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳು

RCB ಯು ತನ್ನ 18 ವರ್ಷದ ನಂತರ ಮೊದಲ ಬಾರಿಗೆ IPL ಟ್ರೋಫಿ ಗೆದ್ದಿತ್ತು. ಅದೇ ವೇಳೆ ಸುಮಾರು 2 ರಿಂದ 3 ಲಕ್ಷ ಜನರು ಸಂಭ್ರಮದಲ್ಲಿ ಭಾಗವಹಿಸಿದ್ದರು.ಸ್ಟೇಡಿಯಂ ಹೊರಭಾಗದಲ್ಲಿ ಕಾಲ್ತುಳಿತ ಉಂಟಾಯಿತು. ಈ ದುರಂತದಲ್ಲಿ 11 ಜನ ಅಭಿಮಾನಿಗಳು ಮೃತಪಟ್ಟರು ಹಾಗೂ ಹಲವಾರು ಮಂದಿ ಗಾಯಗೊಂಡರು. ಮೃತಪಟ್ಟವರಲ್ಲಿ ಯುವಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರೂ ಇದ್ದರು.

ಈ ಬಾರಿ ಇದಕ್ಕಾಗಿ ಅಹಮದಾಬಾದ್‌ನಲ್ಲಿ ಭಾರಿ ಪೊಲೀಸ್ ಭದ್ರತೆ. ಸ್ಟೇಡಿಯಂ ಸುತ್ತ ವಿಶೇಷ ನಿಗಾ, ಟ್ರಾಫಿಕ್ ನಿಯಂತ್ರಣ ಮತ್ತು ಭದ್ರತಾ ಕ್ರಮಗಳನ್ನು ಕೈಗೊಂಡಿದೆ

ಪಿಚ್ ರಿಪೋರ್ಟ್ ಏನು ಹೇಳುತ್ತದೆ?

ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ನೆರವಾಗುವಂತಿದೆ. ದೊಡ್ಡ ಮೊತ್ತದ ಸ್ಕೋರ್ ಕಾಣುವ ಸಾಧ್ಯತೆ ಇರುವುದರಿಂದ ಅಭಿಮಾನಿಗಳು ರನ್‌ಮಳೆಯ ನಿರೀಕ್ಷೆಯಲ್ಲಿದ್ದಾರೆ. ಈ ಸೀಸನ್‌ನಲ್ಲಿ RCB ತಂಡವು GT ವಿರುದ್ಧ ಉತ್ತಮ ಪ್ರದರ್ಶನ ನೀಡಿರುವುದು ಬೆಂಗಳೂರಿನ ಅಭಿಮಾನಿಗಳಿಗೆ ಮತ್ತಷ್ಟು ಆತ್ಮವಿಶ್ವಾಸ ನೀಡಿದೆ.

ಸ್ಟಾರ್ ಆಟಗಾರರ ಸೆಣಸಾಟ

ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ನಡುವಿನ ಪೈಪೋಟಿ, ಶುಭಮನ್ ಗಿಲ್ ಮತ್ತು ಜೋಶ್ ಹೇಜಲ್‌ವುಡ್ ನಡುವಿನ ಕದನ, ಜೊತೆಗೆ ಸಾಯಿ ಸುದರ್ಶನ್ ಹಾಗೂ ಭುವನೇಶ್ವರ್ ಕುಮಾರ್ ನಡುವಿನ ಹೋರಾಟ ಪಂದ್ಯದ ಫಲಿತಾಂಶದ ಮೇಲೆ ದೊಡ್ಡ ಪ್ರಭಾವ ಬೀರುವ ಸಾಧ್ಯತೆ ಇದೆ.

ತಜ್ಞರ ಅಭಿಪ್ರಾಯ

ಮಾಜಿ ಭಾರತೀಯ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಈ ಪಂದ್ಯವನ್ನು “50-50” ಹೋರಾಟ ಎಂದು ಬಣ್ಣಿಸಿದ್ದಾರೆ. ಎರಡೂ ತಂಡಗಳು ಬಲಿಷ್ಠವಾಗಿದ್ದು, ಒತ್ತಡವನ್ನು ಯಾರು ಉತ್ತಮವಾಗಿ ನಿಭಾಯಿಸುತ್ತಾರೋ ಅವರು ಚಾಂಪಿಯನ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮಳೆ ಬಂದರೆ ಏನಾಗುತ್ತದೆ?

ಪಂದ್ಯಕ್ಕೆ ಮಳೆ ಅಡ್ಡಿಯಾದರೆ IPL ನಿಯಮಗಳ ಪ್ರಕಾರ ರಿಸರ್ವ್ ಡೇ ವ್ಯವಸ್ಥೆ ಇದೆ. ಒಂದು ವೇಳೆ ರಿಸರ್ವ್ ಡೇಯಲ್ಲೂ ಪಂದ್ಯ ಪೂರ್ಣಗೊಳ್ಳದಿದ್ದರೆ, ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿದ್ದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

RCB ಅಭಿಮಾನಿಗಳ ಕನಸು ಮತ್ತೊಮ್ಮೆ ನನಸಾಗುತ್ತದೆಯೇ? ಅಥವಾ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಮತ್ತೊಮ್ಮೆ ಇತಿಹಾಸ ಸೃಷ್ಟಿಸುತ್ತದೆಯೇ? ಈ ಪ್ರಶ್ನೆಗೆ ಉತ್ತರ ಕೆಲವೇ ಗಂಟೆಗಳಲ್ಲಿ ಸಿಗಲಿದೆ. ಸದ್ಯ ಕ್ರಿಕೆಟ್ ಜಗತ್ತಿನ ಕಣ್ಣು IPL 2026ರ ಈ ಮಹಾ ಫೈನಲ್ ಮೇಲೆಯೇ  ನಿಂತಿದೆ.

Leave a Comment