Telegram Join My Telegram   WhatsApp Join My WhatsApp

ದೆಹಲಿ ಹೋಟೆಲ್ ಅಗ್ನಿ ದುರಂತ:21 ಸಾವು, ಹಲವರು ಆಸ್ಪತ್ರೆಯಲ್ಲಿ

ನವದೆಹಲಿಯ ಮಾಲವಿಯಾ ನಗರದಲ್ಲಿ ಬುಧವಾರ ನಡೆದ ಭೀಕರ ಅಗ್ನಿ ಅವಘಡ ದೇಶದಾದ್ಯಂತ ಆತಂಕ ಸೃಷ್ಟಿಸಿದೆ. ಹೌದು ಹೋಟೆಲ್ ಹಾಗೂ ರೆಸ್ಟೋರೆಂಟ್ ಹೊಂದಿದ್ದ ಬಹುಮಹಡಿ ಕಟ್ಟಡದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ 40ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಘಟನೆ ಹೇಗೆ ನಡೆಯಿತು? 

ಬೆಳಿಗ್ಗೆ ಸುಮಾರು 9 ಗಂಟೆಯ ವೇಳೆಗೆ ಕಟ್ಟಡದ ನೆಲ ಮಹಡಿಯಲ್ಲಿದ್ದ ರೆಸ್ಟೋರೆಂಟ್ ಭಾಗದಲ್ಲಿ ಮೊದಲು ಹೊಗೆ ಕಾಣಿಸಿಕೊಂಡಿತು. ಕೆಲವೇ ನಿಮಿಷಗಳಲ್ಲಿ ಬೆಂಕಿ ಕಟ್ಟಡದ ಇತರೆ ಮಹಡಿಗಳಿಗೂ ವ್ಯಾಪಿಸಿತು. ಇದರಿಂದಾಗಿ ಹೋಟೆಲ್‌ನಲ್ಲಿ ತಂಗಿದ್ದ ಅನೇಕ ಅತಿಥಿಗಳು ಮೇಲಿನ ಮಹಡಿಗಳಲ್ಲಿ ಸಿಲುಕಿಕೊಂಡರು.ಬೆಂಕಿಯ ತೀವ್ರತೆ ಹೆಚ್ಚಾದ ಕಾರಣ ಕೆಲವರು ಕಿಟಕಿಗಳ ಮೂಲಕ ಹೊರಬರಲು ಪ್ರಯತ್ನಿಸಿದರು. ಕೆಲವರು ಕಟ್ಟಡದಿಂದ ಜಿಗಿಯುವ ಪರಿಸ್ಥಿತಿಯು ನಿರ್ಮಾಣವಾಗಿತ್ತು ಎನ್ನಲಾಗಿದೆ

ರಕ್ಷಣಾ ಕಾರ್ಯಚರಣೆ 

ಮಾಹಿತಿ ತಿಳಿದ ನಂತರ ರಕ್ಷಣಾ ಕಾರ್ಯಚರಣೆಯ ವಾಹನಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದರು ಕಾರ್ಯಾಚರಣೆಯ ನಂತರ ಬೆಂಕಿಯನ್ನು ಸಂಪೂರ್ಣ ವಾಗಿ ನಿಯಂತ್ರಣಕ್ಕೆ ತರಲಾಯಿತು ಕೆಲವರನ್ನು ಸುರಕ್ಷಿತವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು ಪೊಲೀಸರ ಮಾಹಿತಿಯ ಪ್ರಕಾರ ಮೃತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ ಗಾಯಾಳುಗಳ ಸ್ಥಿತಿಗಂಬೀರವಾಗಿದೆ ಸಾವನ್ನಪ್ಪಿದವರಲ್ಲಿ ವಿದೇಶಿ ನಾಗರಿಕರೂ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ

ಬೆಂಕಿ ಅವಘಡಕ್ಕೆ ಕಾರಣ ಏನು?

ರೆಸ್ಟೋರೆಂಟ್ ಪ್ರದೇಶದಲ್ಲೇ ಮೊದಲು ಬೆಂಕಿ ಕಾಣಿಸಿಕೊಂಡಿರುವುದರಿಂದ ಅಲ್ಲಿಂದಲೇ ಅವಘಡ ಆರಂಭವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ ಇದೇ ಅವಘಡಕ್ಕೆ ನಿಖರವಾದ ಕಾರಣ ಎಂಬುದು ಸ್ಪಷ್ಟವಾಗಿಲ್ಲ.ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಪ್ರಧಾನಿ ಮೋದಿ ಪ್ರತಿಕ್ರಿಯೆ 

ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವ ಮೂಲಕ ಈ ದುರ್ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ದೆಹಲಿಯಲ್ಲಿ ನಡೆದ ಈ ಅಗ್ನಿ ಅವಘಡವೂ ತುಂಬಾನೇ ಬೆಚ್ಚಿ ಬೀಳಿಸುವಂಥಾಗಿದ್ದು ಈ ವರ್ಷದ ಅತಿ ಭೀಕರ ಘಟನೆಗಳಲ್ಲೊಂದಾಗಿದೆ ಈ ಘಟನೆಯು ಅಗ್ನಿ ಸುರಕ್ಷತಾ ಕ್ರಮಗಳ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸಿದೆ

Leave a Comment