Telegram Join My Telegram   WhatsApp Join My WhatsApp

ಚೆನ್ನಮ್ಮ ದೇವೇಗೌಡ ರವರ ಕೊನೆಯ ಕ್ಷಣಗಳು

ಮಾಜಿ ಪ್ರಧಾನಿ ಜೆಡಿಎಸ್ ಪಕ್ಷದ ಹಿರಿಯ ನಾಯಕ H. D. Deve Gowda ಅವರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡ ಅವರ ನಿಧನವು ಕರ್ನಾಟಕ ರಾಜಕೀಯ ಮತ್ತು ಸಾಮಾಜಿಕ ವಲಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಸರಳತೆ, ಮೌನ ಮತ್ತು ಸೇವೆಯ ಜೀವನವನ್ನೇ ಯಾವಾಗಲೂ ಆರಿಸಿಕೊಂಡಿದ್ದರು. ಕುಟುಂಬಕ್ಕೆ ಕೇಂದ್ರ ಬಿಂದುವಾಗಿದ್ದ ಚನ್ನಮ್ಮರವರ ನಿಧನವು ಕುಟುಂಬ ಸದಸ್ಯರಿಗೆ ತಳಲಾಗದ ನೋವನ್ನುಂಟು ಮಾಡಿದೆ.

ಆರಂಭಿಕ ಜೀವನ

ಸಂಪ್ರದಾಯ ಮತ್ತು ಮೌಲ್ಯಗಳನ್ನು ಜೀವನದ ಆಧಾರವಾಗಿಸಿಕೊಂಡಿದ್ದ ಚೆನ್ನಮ್ಮ ರವರು ಕರ್ನಾಟಕದ ಗ್ರಾಮೀಣ ಕುಟುಂಬ ಒಂದರಲ್ಲಿ ಜನಿಸಿದರು. ದೇವೇಗೌಡರ ರಾಜಕೀಯ ಜೀವನದ ಪ್ರತಿ ಹಂತದಲ್ಲೂ ಜೊತೆಯಾಗಿ ಬೆಂಬಲವಾಗಿ ನಿಂತರು ತಮ್ಮ ಸರಳ ವ್ಯಕ್ತಿತ್ವದಿಂದ ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ ತಮ್ಮ ಸರಳ ವ್ಯಕ್ತಿತ್ವದಿಂದ ಎಲ್ಲರ ಗೌರವವನ್ನು ಗಳಸಿದ್ದರು.

ಸಾಮಾಜಿಕ ಸೇವೆಗಳಲ್ಲಿ ಚೆನ್ನಮ್ಮ ರವರ ಪಾತ್ರ 

ಚೆನ್ನಮ್ಮ ರವರು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ನೆರವು ಹಾಗೂ ಅಗತ್ಯವಿರುವವರಿಗೆ ಮೌನವಾಗಿ ಸಹಾಯ ಮಾಡುವ ಗುಣದಿಂದ ಅವರು ಪರಿಚಿತರಾಗಿದ್ದರು. ಅವರು ಅತಿ ದೊಡ್ಡ ಪ್ರಚಾರವಿಲ್ಲದೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಬೆಂಬಲ ನೀಡುತ್ತಿದ್ದರು. ಬಡವರಿಗೆ ಸಹಾಯ ಇನ್ನಿತರ ಸಹಾಯ ಗುಣ ಅವರಲ್ಲಿ ಇದ್ದ ಕಾರಣ ಅವರನ್ನು ಇಷ್ಟಪಡುವ ಜನ ಅಪಾರ

ಅವರ ಸರಳ ಜೀವನ 

ಸರಳತೆಯನ್ನು ಹೆಚ್ಚಾಗಿ ರೂಡಿಸಿಕೊಂಡಿದ್ದ ಚೆನ್ನಮ್ಮ ರವರು ಪ್ರಧಾನಮಂತ್ರಿಯವರ ಪತ್ನಿ ಆಗಿದ್ದರು ಸಾಂಪ್ರದಾಯಿಕ ಉಡುಗೆ, ಸರಳ ಆಹಾರ, ಕುಟುಂಬದೊಂದಿಗೆ ಸಮಯ ಕಳೆಯುವುದು ಮತ್ತು ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವುದು ಅವರ ದೈನಂದಿನ ಜೀವನದ ಭಾಗವಾಗಿತ್ತು.

ದೇವೇಗೌಡರ ಯಶಸ್ಸಿನ ಹಿಂದಿದ್ದ ಶಕ್ತಿ

H. D. Deve Gowda ಅವರು ಮುಖ್ಯಮಂತ್ರಿ ಹಾಗೂ ನಂತರ ಭಾರತದ ಪ್ರಧಾನಮಂತ್ರಿಯಾದ ಸಂದರ್ಭದಲ್ಲಿಯೂ ಚೆನ್ನಮ್ಮ ಅವರು ಎಂದಿಗೂ ಪ್ರಚಾರವನ್ನು ಬಯಸಲಿಲ್ಲ. ಕುಟುಂಬದ ಏಕತೆ ಮತ್ತು ಮೌಲ್ಯಗಳನ್ನು ಕಾಪಾಡುವುದು ಅವರ ಪ್ರಮುಖ ಆದ್ಯತೆಯಾಗಿತ್ತು. ಪತಿ ದೇವೇಗೌಡರ ಪ್ರತಿ ರಾಜಕೀಯ ಬೆಳವಣಿಗೆಯಲ್ಲೂ ಪತ್ನಿಯಾಗಿ ಅವರ ಬೆಂಬಲವಾಗಿ ನಿಂತು ಅವರ ಯಶಸ್ಸಿಗೆ ಮುಖ್ಯ ಕಾರಣವಾಗಿದ್ದಾರೆ.

ಅವರ ಸೇವಾ ಮನೋಭಾವನೆ ಸರಳ ಜೀವನ ಕುಟುಂಬದ ಮೇಲಿನ ಅಪಾರ ಪ್ರೀತಿ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಗೌರವ ಇವೆಲ್ಲವೂ ಅವರ ಗೌರವವನ್ನು ಹೆಚ್ಚಿಸುತ್ತದೆ ಚೆನ್ನಮ್ಮ ರವರು ರಾಜಕೀಯ ನಾಯಕಿಯಾಗಿಲ್ಲದಿದ್ದರೂ.ಭಾರತದ ಪ್ರಮುಖ ರಾಜಕೀಯ ಕುಟುಂಬವೊಂದರ ಬಲವಾದ ಆಧಾರಸ್ತಂಭರಾಗಿದ್ದರು.ಅವರ ಜೀವನವು ಸರಳತೆ, ಸೇವೆ ಮತ್ತು ಕುಟುಂಬ ಮೌಲ್ಯಗಳ ಮಹತ್ವವನ್ನು ಸಾರುವ ಪ್ರೇರಣಾದಾಯಕ ಉದಾಹರಣೆಯಾಗಿ ಸದಾ ನೆನಪಿನಲ್ಲಿ ಉಳಿಯಲಿದೆ.

ಕೊನೆಯ ಕ್ಷಣಗಳು

ಉಸಿರಾಟದ ಸಮಸ್ಯೆಯಿಂದ ಬುದುವಾರ ರಾತ್ರಿ ಮಣಿಪಾಲ್ ಆಸ್ಪತ್ರೆಗೆ ಚೆನ್ನಮ್ಮ ರವರು ದಾಖಲಾಗಿದ್ದರು ಆಸ್ಪತ್ರೆಯ ಮಾಹಿತಿ ಪ್ರಕಾರ, ಚಿಕಿತ್ಸೆ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆಯ ಲಕ್ಷಣಗಳು ಕಂಡುಬಂದಿದ್ದವು. ಆದರೆ ಜುಲೈ 18ರಂದು ಸಂಜೆ ಸುಮಾರು 4 ಗಂಟೆಗೆ ಅವರಿಗೆ ತೀವ್ರ ಹೃದಯಾಘಾತ (Massive Cardiac Arrest) ಉಂಟಾಗಿ, ವೈದ್ಯರ ಎಲ್ಲಾ ಪ್ರಯತ್ನಗಳ ನಡುವೆಯೂ ಅವರು ಕೊನೆಯುಸಿರೆಳೆದರು.

ಚೆನ್ನಮ್ಮ ರವರ ಅಗಲಿಕೆಗೆ ರಾಜಕೀಯ ನಾಯಕರುಗಳ ಸಂತಾಪ 

ಚೆನ್ನಮ್ಮ ರವರ ಅಗಲಿಕೆಗೆ .Narendra Modi.Mallikarjun Kharge.Rahul Gandhi.Rajnath Singh.Siddaramaiah.D. K. Shivakumar.G. Parameshwara.B. S. Yediyurappa.Sarbananda Sonowal ಇನ್ನು ಮುಂತಾದ ರಾಜಕೀಯ ನಾಯಕರುಗಳು ಸಂತಾಪ ಸೂಚಿಸಿದ್ದಾರೆ.

Leave a Comment