Telegram Join My Telegram   WhatsApp Join My WhatsApp

‘Cockroach Janta Party’ ದೇಶದೆಲ್ಲೆಡೆ ಶುರುವಾಯಿತು ಯುವಕರ ಡಿಜಿಟಲ್ ಪ್ರತಿಭಟನೆ

Cockroach Janta Party’ ದೇಶದೆಲ್ಲೆಡೆ ಶುರುವಾಯಿತು ಯುವಕರ ಡಿಜಿಟಲ್ ಪ್ರತಿಭಟನೆ

Instagram Reels, X (Twitter) ಪೋಸ್ಟ್‌ಗಳು, YouTube Shorts ಮತ್ತು memes ಗಳ ಮೂಲಕ ಯುವಕರು ತಮ್ಮ ಅಸಮಾಧಾನವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಅಸಲಿ ಕಾರಣ ಏನಿರಬಹುದು

ಇತ್ತೀಚಿ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ “Cockroach Janta Party” ಎಂಬ ಹೆಸರು ಭಾರೀ ವೈರಲ್ ಆಗಿದೆ ಒಂದು ವಿವಾದಾತ್ಮಕ ಹೇಳಿಕೆಯಿಂದ ಶುರುವಾದ ಟ್ರೆಂಡ್ ಈಗ ದೇಶದಲ್ಲೆಡೆ ವೈರಲ್ ಆಗುತ್ತಿದೆ ವ್ಯಂಗ್ಯ ದ ಮೂಲಕವೇ ಯುವಕರು ತಮ್ಮ ನೋವನ್ನು ಹೊರ ಹಾಕುತ್ತಿರುವುದು ದೇಶದ ಜನರ ಗಮನವನ್ನು ಸೆಳೆಯುತ್ತಿದೆ

ಟ್ರೆಂಡ್ ಆರಂಭವಾಗಲು ಕಾರಣವೇನು ?

“cockroach” ಎಂಬಾ ಪದವು ಉದ್ಯೋಗವಿಲ್ಲದ ಯುವಕರ ಕುರಿತು ನಡೆದ ಚರ್ಚೆಯ ವೇಳೆ ಬಳಸಲಾಗಿದ್ದು ಬಾರಿ ವಿವಾದಕ್ಕೆ ಕಾರಣವಾಗಿದೆ ಹಲವರು ಇದನ್ನು ಯುವಕರಿಗೆ ಮಾಡಿದ ಅವಮಾನ ಎಂದು ಪರಿಗಣಿಸಿದರು.

ಕೋಪದ ಬದಲು, ಯುವಕರು cocratch ಎಂಬ ಪದವನ್ನು ವ್ಯಂಗ್ಯ ಮತ್ತು memes ಮೂಲಕ ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ ನಂತರ “Cockroach Janta Party” ಎಂಬ ಡಿಜಿಟಲ್ ಟ್ರೆಂಡ್ ರೂಪುಗೊಂಡಿತು

ಯುವಕರ ಮನಸ್ಥಿತಿಯನ್ನು ಪ್ರತಿಬಿಂಬಿಸಿದ ಟ್ರೆಂಡ್

ಭಾರತದ ಪ್ರಮುಖ ಸಮಸ್ಯೆಗಳಲ್ಲಿ ನಿರುದ್ಯೋಗವು ಒಂದು ಅನೇಕ ಪದವೀಧರರು ಉದ್ಯೋಗಕ್ಕಾಗಿ ವರ್ಷಗಳ ಕಾಲ ಕಾಯುತ್ತಿದ್ದಾರೆ ಹೆಚ್ಚುತ್ತಿರುವ ಸ್ಪರ್ಧೆ.ಜೀವನ ವೆಚ್ಚ ಮತ್ತು ಒತ್ತಡದಿಂದ ಹಲವರು ನಿರಾಶರಾಗಿದ್ದಾರೆ.

ಆದ್ದರಿಂದ “Cockroach Janta Party” ಕೇವಲ ಮೀಮ್ ಟ್ರೆಂಡ್ ಆಗಿರದೇ, ಇಂದಿನ ಯುವಕರ ಮನಸ್ಥಿತಿಯ ಪ್ರತಿಬಿಂಬವಾಗಿ ಪರಿಣಮಿಸಿದೆ.

Social media ದಲ್ಲಿ ವೈರಲ್

ಯುವಕರು ತಮ್ಮನ್ನು “Cockroach Generation” ಎಂದು ಕರೆದುಕೊಳ್ಳುವ ಮೂಲಕ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ ಕೆಲವೇ ದಿನಗಳಲ್ಲಿ ಈ ಟ್ರೆಂಡ್ Instagram, Facebook, X ಹಾಗೂ YouTube ನಲ್ಲಿ ಭಾರೀ ವೈರಲ್ ಆಗಿದೆ

ಕೆಲವರು ಜಿರಳೆ ವೇಷದಲ್ಲಿ ವಿಡಿಯೋ ಮಾಡುವ ಮೂಲಕ “ನಮಗೆ ಉದ್ಯೋಗ ಬೇಕು, ಟ್ಯಾಗ್ ಬೇಡ” ಎಂಬ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿವೆ.

ಮೀಮ್ಸ್ ಮೂಲಕ ಹೊಸ ರೀತಿಯ ಪ್ರತಿಭಟನೆ

ಪ್ರತಿಭಟನೆ ಎಂದರೆ ರಸ್ತೆಗಿಳಿದು ಘೋಷಣೆ ಕೂಗುವುದು ಸಾಮಾನ್ಯವಾಗಿತ್ತು ಆದರೆ ಈಗ ಡಿಜಿಟಲ್ ಯುಗದಲ್ಲಿ memes, reels ಮತ್ತು viral posts ಕೂಡ ಪ್ರತಿಭಟನೆಯ ಹೊಸ ರೂಪಗಳಾಗಿವೆ

ಹೆಚ್ಚಾದ ವಿವಾದವು

ಈ ಟ್ರೆಂಡ್‌ಗೆ ಸಂಬಂಧಿಸಿದ ಕೆಲವು ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ನಿರ್ಬಂಧ ಹಾಗೂ hacking ಪ್ರಯತ್ನಗಳ ಆರೋಪಗಳು ಕೇಳಿಬಂದಿವೆ. ಇದರಿಂದ ವಿಷಯ ಇನ್ನಷ್ಟು ವೈರಲ್ ಆಯಿತು.

ಈ ಟ್ರೆಂಡ್ ಮೂಲಕ ಯುವಕರು ಕೇಳುತ್ತಿರುವ ಪ್ರಮುಖ ಪ್ರಶ್ನೆಗಳು:

1.ಯುವಕರ ಸಮಸ್ಯೆಗಳನ್ನು ಯಾರು ಕೇಳುತ್ತಾರೆ?

2.ಸಾಮಾಜಿಕ ಒತ್ತಡದಿಂದ ಹೊರಬರಲು ಏನು ಮಾಡಬೇಕು?

3.ಉದ್ಯೋಗ ಅವಕಾಶಗಳು ಎಲ್ಲಿವೆ?

ಈ ಪ್ರಶ್ನೆಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ.

ಇದು ಕೇವಲ ಟ್ರೆಂಡ್  ಅಲ್ಲ ಇಂದಿನ ಯುವಕರ ಅಸಮಾಧಾನ, ನಿರಾಶೆ ಮತ್ತು ಸಾಮಾಜಿಕ ಒತ್ತಡವೇ ಈ “Cockroach Janta Party” ಯುವಕರು ತಮ್ಮ ಮಾತನ್ನು ಜಗತ್ತಿಗೆ ತಲುಪಿಸುತ್ತಿರುವುದು ಡಿಜಿಟಲ್ ಯುಗದ ಹೊಸ ಪ್ರತಿಭಟನೆ ಶೈಲಿಯಾಗಿದೆ.

Leave a Comment