Telegram Join My Telegram   WhatsApp Join My WhatsApp

90 ವರ್ಷದ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತು.ಪೆನ್ಷನ್ ಪಡೆಯಲು 9 ಕಿ.ಮೀ ನಡೆದ ಮಹಿಳೆ

ಪೆನ್ಷನ್ ಹಣಕ್ಕಾಗಿ 90 ವರ್ಷದ ಅತ್ತೆಯನ್ನು ಹೊತ್ತು ಮಹಿಳೆ 9 ಕಿ.ಮೀ ನಡೆದು ಬ್ಯಾಂಕ್‌ ಗೆ ತೆರಳಿದ ಘಟನೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.

ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಲ್ಲಿ ನಡೆದ ಈ ಮನಕಲುಕುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.ಈ ಘಟನೆಯು ಜನರ ಹೃದಯವನ್ನು ಆಳವಾಗಿ ಮುಟ್ಟಿದೆ

ಬುಡಕಟ್ಟು ಮಹಿಳೆ ಸುಖ್ಮಾನಿಯಾ ಬಾಯಿ ಅವರು ತಮ್ಮ 90 ವರ್ಷದ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತು ಸುಮಾರು 9 ಕಿಲೋಮೀಟರ್ ದೂರದ ಬ್ಯಾಂಕ್‌ಗೆ ನಡೆದುಕೊಂಡು ಹೋಗಿದ್ದಾರೆ.ಕಾಡು ದಾರಿಗಳು, ಹೊಳೆಗಳು, ಕಲ್ಲಿನ ರಸ್ತೆ, ಬಿಸಿಲಿನ ತಾಪಮಾನ — ಇವೆಲ್ಲವನ್ನು ಎದುರಿಸಿ ಅವರು ತಮ್ಮ ಅತ್ತೆಯನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ.

ಕಾರಣ ಏನು?

ವರದಿಗಳ ಪ್ರಕಾರ, ಕಳೆದ ನಾಲ್ಕು ತಿಂಗಳಿಂದ ಆ ಕುಟುಂಬಕ್ಕೆ ಪೆನ್ಷನ್ ಹಣ ಸಿಗುತ್ತಿರಲಿಲ್ಲ. ಬ್ಯಾಂಕ್ ನಿಯಮಗಳ ಪ್ರಕಾರ KYC (Know Your Customer) ಮತ್ತು ದೈಹಿಕ ಹಾಜರಾತಿ ಕಡ್ಡಾಯವಾಗಿದ್ದರಿಂದ, 90 ವರ್ಷದ ಅತ್ತೆಯನ್ನು ಸ್ವತಃ ಬ್ಯಾಂಕ್‌ಗೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಯಿತು.ವಯಸ್ಸು ಮತ್ತು ಆರೋಗ್ಯ ಸಮಸ್ಯೆಗಳ ಕಾರಣದಿಂದ ಅತ್ತೆ ಸ್ವತಃ ನಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಕಾರಣ ಮಹಿಳೆ ತನ್ನ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತು ಬ್ಯಾಂಕ್‌ಗೆ ತೆರಳುವ ನಿರ್ಧಾರ ತೆಗೆದುಕೊಂಡರು.

ಬ್ಯಾಂಕ್ ನಿಯಮಗಳ ಬಗ್ಗೆ ಚರ್ಚೆ

ಹಿರಿಯ ನಾಗರಿಕರಿಗೆ ಅಥವಾ ಅಸ್ವಸ್ಥರಿಗೆ alternative verification ವ್ಯವಸ್ಥೆ ಇರಬೇಕಿತ್ತು ಎಂದು ಹಲವರು ಈ ಘಟನೆಯ ನಂತರ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ

ಈ ಘಟನೆ ಗಮನಕ್ಕೆ ಬಂದ ನಂತರ ಸ್ಥಳೀಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು,ಮುಂದಿನ ದಿನಗಳಲ್ಲಿ ಪೆನ್ಷನ್ ಅನ್ನು ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

ಜನರ ಪ್ರತಿಕ್ರಿಯೆ

ಲಕ್ಷಾಂತರ ಜನರು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನ ಬೆಳೆಯುತ್ತಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳು ಇನ್ನೂ ಸಂಪೂರ್ಣವಾಗಿ ತಲುಪಿಲ್ಲ ಎಂಬ ಚರ್ಚೆ ಮತ್ತೆ ಆರಂಭವಾಗಿದೆ.

ಗ್ರಾಮೀಣ ಭಾರತದ ನಿಜ ಸ್ಥಿತಿ

ಅನೇಕ ಹಳ್ಳಿಗಳಲ್ಲಿ ಇನ್ನೂ ಬ್ಯಾಂಕ್, ರಸ್ತೆ, ಸಾರಿಗೆ ವ್ಯವಸ್ಥೆಗಳು ಸರಿಯಾಗಿ ಅಭಿವೃದ್ಧಿಯಾಗಿಲ್ಲ. ಎಂಬುದು ಗ್ರಾಮೀಣ ಭಾರತದ ಜೀವನದ ಕಠಿಣ ಸತ್ಯವನ್ನು ತೋರಿಸುತ್ತದೆ.

Leave a Comment