ಸಿನಿರಂಗದ ಜನಪ್ರಿಯ ನಟಿ Rukmini Vasanth ಇದೀಗ ಡೀಪ್ಫೇಕ್ ವಿವಾದದ ಕಾರಣದಿಂದ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಕೆಲವು ಬಿಕಿನಿ ಫೋಟೋಗಳು ಹಾಗೂ ವೀಡಿಯೊಗಳ ಬಗ್ಗೆ ನಟಿ ಅಧಿಕೃತ ಪ್ರತಿಕ್ರಿಯೆ ನೀಡಿದ್ದು, ಅವು ಸಂಪೂರ್ಣ ನಕಲಿ ಹಾಗೂ AI ಮೂಲಕ ಸೃಷ್ಟಿಸಲಾದ ಡೀಪ್ಫೇಕ್ ದೃಶ್ಯಗಳು ಎಂದು ಸ್ಪಷ್ಟಪಡಿಸಿದ್ದಾರೆ.ಈ ಘಟನೆ ಇದೀಗ ಸಿನಿರಂಗ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
AI ತಂತ್ರಜ್ಞಾನ ಬಳಸಿ ನಟಿಯ ಮುಖವನ್ನು ಬೇರೆ ವ್ಯಕ್ತಿಯ ದೇಹಕ್ಕೆ ಜೋಡಿಸಿ ಈ ನಕಲಿ ಚಿತ್ರಗಳನ್ನು ಸೃಷ್ಟಿಸಲಾಗಿದೆ ಎನ್ನಲಾಗಿದೆ.ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಹಲವರು ಅವನ್ನು ನಿಜವೆಂದು ನಂಬಿ ಹಂಚಿಕೊಳ್ಳಲು ಆರಂಭಿಸಿದ್ದರು.ಕೆಲವೇ ಗಂಟೆಗಳಲ್ಲಿ ಈ ವಿಷಯ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಗಿದ್ದು, ಅಭಿಮಾನಿಗಳಲ್ಲೂ ಗೊಂದಲ ಉಂಟಾಗಿತ್ತು.
ನಟಿ ರುಕ್ಮಿಣಿ ವಸಂತ್ ಪ್ರತಿಕ್ರಿಯೆ
“ಇದು ನನ್ನ ವೈಯಕ್ತಿಕ ಗೌಪ್ಯತೆ ಹಾಗೂ ವ್ಯಕ್ತಿತ್ವದ ಮೇಲೆ ನಡೆದ ಗಂಭೀರ ದಾಳಿ. ಯಾರೂ ಕೂಡ ಇಂತಹ ನಕಲಿ ಚಿತ್ರಗಳನ್ನು ನಂಬಬಾರದು” ಎಂದು ರುಕ್ಮಿಣಿ ವಸಂತ್ ರವರು ಪ್ರತಿಕ್ರಿಯೆ ನೀಡಿದ್ದಾರೆ
ಡೀಪ್ಫೇಕ್ ಕಂಟೆಂಟ್ ಸೃಷ್ಟಿಸಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದರ ಬಗ್ಗೆ ನಟಿ ಈಗಾಗಲೇ ಸೈಬರ್ ಕ್ರೈಂ ವಿಭಾಗಕ್ಕೆ ದೂರು ದಾಖಲಿಸಿದ್ದಾರೆ. ಸೈಬರ್ ತಜ್ಞರ ಪ್ರಕಾರ, ಇತ್ತೀಚಿನ ದಿನಗಳಲ್ಲಿ AI ತಂತ್ರಜ್ಞಾನದ ದುರುಪಯೋಗ ಹೆಚ್ಚಾಗುತ್ತಿದ್ದು, ನಕಲಿ ಫೋಟೋ ಮತ್ತು ವೀಡಿಯೊಗಳನ್ನು ಸೃಷ್ಟಿಸುವುದು ತುಂಬಾ ಸುಲಭವಾಗುತ್ತಿದೆ. ಇದೇ ಕಾರಣಕ್ಕೆ ಸಾಮಾನ್ಯ ಜನರು ಕೂಡ ಇಂತಹ ಘಟನೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ
ಅನೇಕ ಅಭಿಮಾನಿಗಳು ನಟಿಗೆ ಬೆಂಬಲ ಸೂಚಿಸಿದ್ದು, “AI misuse ಈಗ ಅಪಾಯಕಾರಿಯಾದ ಮಟ್ಟಕ್ಕೆ ಹೋಗಿದೆ” ಎಂದು ಪ್ರತಿಕ್ರಿಯಿಸುತ್ತಿದ್ದಾರೆ.ಕೆಲವರು ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸುತ್ತಿದ್ದಾರೆ.
ವಿಶೇಷವಾಗಿ AI ಬಳಸಿ ಸೃಷ್ಟಿಸಲಾಗುವ ಡೀಪ್ಫೇಕ್ ಕಂಟೆಂಟ್ ಭವಿಷ್ಯದಲ್ಲಿ ಇನ್ನಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ.
ತಂತ್ರಜ್ಞಾನ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ, ಅದರ ದುರುಪಯೋಗವನ್ನು ತಡೆಯುವುದು ದೊಡ್ಡ ಸವಾಲಾಗಿದೆ