Telegram Join My Telegram   WhatsApp Join My WhatsApp

Melody Toffee Viral ಮೋದಿ-ಮೆಲೋನಿ ‘Melodi’ ಮೀಮ್ ಹೇಗೆ ವಿಶ್ವವನ್ನೇ ಸೆಳೆದಿತು?

Melody Toffee Viral ಮೋದಿ-ಮೆಲೋನಿ ‘Melodi’ ಮೀಮ್ ಹೇಗೆ ವಿಶ್ವವನ್ನೇ ಸೆಳೆದಿತು?

ಹೌದು! ಭಾರತದ ಜನಪ್ರಿಯ Melody ಟಾಫಿ ಈಗ ಭಾರತ-ಇಟಲಿ ಸ್ನೇಹದ ಹೊಸ ಸಂಕೇತವಾಗಿ ಒಂದು ಕಾಲದಲ್ಲಿ ಮಕ್ಕಳ ಜೇಬಿನಲ್ಲಿ ಕಾಣಿಸುತ್ತಿದ್ದ ₹1 “Melody” ಟಾಫಿ ಈಗ ಜಾಗತಿಕ ರಾಜಕೀಯ ಚರ್ಚೆಯ ಭಾಗವಾಗಿದೆ ಎಂದರೆ ನಂಬುತ್ತೀರಾ?

Narendra Modi ಮತ್ತು ಇಟಲಿಯ ಪ್ರಧಾನಿ Giorgia Meloni. 2023ರ G20 Summit ವೇಳೆ ಇಬ್ಬರ ಸ್ನೇಹಭಾವದ ಫೋಟೋಗಳು ಇಂಟರ್ನೆಟ್‌ನಲ್ಲಿ ಸದ್ದು ಮಾಡಿದ್ದವು. ಆಗಲೇ ನೆಟಿಜನ್‌ಗಳು “Modi” ಮತ್ತು “Meloni” ಹೆಸರನ್ನು ಸೇರಿಸಿ “Melodi” ಎಂಬ ಹೊಸ ಟ್ರೆಂಡ್ ಹುಟ್ಟುಹಾಕಿದರು.

ಆದರೆ ಕಥೆ ಅಲ್ಲಿ ನಿಲ್ಲಲಿಲ್ಲ Giorgia Meloni ತಾನೇ #Melodi ಹ್ಯಾಶ್‌ಟ್ಯಾಗ್ ಬಳಸಿದ ಕ್ಷಣದಿಂದ ಈ ಮೀಮ್ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಹಿಟ್ ಆಯಿತು. ರಾಜಕೀಯ ನಾಯಕರ ಸ್ನೇಹವನ್ನು ಜನರು ಫನ್ ಮತ್ತು ಮೀಮ್ ಕಲ್ಚರ್ ಮೂಲಕ ಆಚರಿಸಲು ಆರಂಭಿಸಿದರು

Meloni ಅವರಿಗೆ ಮೋದಿಯವರು ರೋಮ್ನಲ್ಲಿ ನಡೆದ ಮಹತ್ವದ ಚರ್ಚೆ ಒಂದರಲ್ಲಿ Melody ಟಾಫಿಯನ್ನು ಗಿಫ್ಟ್ ನೀಡಿದ್ದರು ಇದನ್ನು ಅವರು ತಮ್ಮ instagram ಅಕೌಂಟಿನಲ್ಲಿ ಹಂಚಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ “Melody Diplomacy” ಎಂಬ ಪದವೇ ಟ್ರೆಂಡಿಂಗ್ ಆಯಿತು. ಹಲವರು ಇದನ್ನು “Toffee Diplomacy” ಎಂದು ಕರೆಯುತ್ತಾ ಫನ್ನಿ ಮೀಮ್ಸ್ ಸೃಷ್ಟಿಸಿದರು..

ಅಲ್ಲದೆ “Melody Modi” ಮತ್ತು “Meloni Melody” ಎಂಬ ಗೂಗಲ್ ಹುಡುಕಾಟಗಳು ಅಚ್ಚರಿಯ ಮಟ್ಟದಲ್ಲಿ ಹೆಚ್ಚಾದವು ಎಂದು ವರದಿಗಳು ಹೇಳುತ್ತಿವೆ. X, Instagram ಮತ್ತು Reddit ನಲ್ಲಿ ಸಾವಿರಾರು ಪೋಸ್ಟ್‌ಗಳು, ರೀಲ್ಸ್ ಮತ್ತು ಮೀಮ್ಸ್ ಹರಿದಾಡಿದವು. ಈ ಘಟನೆ ಬಳಿಕ Melody ಟಾಫಿಯ ಜನಪ್ರಿಯತೆ ಭಾರೀ ಮಟ್ಟದಲ್ಲಿ ಏರಿಕೆಯಾಯಿತು

ಕೆಲ ನೆಟಿಜನ್‌ಗಳು ಇದನ್ನು “2026ರ sweetest political crossover” ಎಂದೂ ಕರೆಯುತ್ತಿದ್ದಾರೆ.“Melodi” ಈಗ ಕೇವಲ ಮೀಮ್ ಅಲ್ಲ — ಅದು ಇಂಟರ್ನೆಟ್ ಯುಗದ ಹೊಸ ರಾಜಕೀಯ-ಪಾಪ್ ಕಲ್ಚರ್ ಸಿಂಬಲ್ ಆಗಿದೆ

 

Leave a Comment