Telegram Join My Telegram   WhatsApp Join My WhatsApp

ಮಂಗಳ ಗ್ರಹದಲ್ಲಿ ಜೀವನ ಸಾಧ್ಯವೇ? ವಿಜ್ಞಾನ ಹೇಳುವ ಅಚ್ಚರಿಯ ಸತ್ಯಗಳು

ಹಲವು ವರ್ಷಗಳಿಂದ ಭೂಮಿಯ ಹೊರತುಪಡಿಸಿ ಮನುಷ್ಯರು ವಾಸಿಸಲು ಸೂಕ್ತವಾದ ಸ್ಥಳಗಳ ಹುಡುಕಾಟ ನಡೆಯುತ್ತಿದೆ.ಕೆಂಪು ಗ್ರಹ ಎಂದು ಕರೆಯಲ್ಪಡುವ ಮಂಗಳ ಗ್ರಹದಲ್ಲಿ ಮಾನವರು ವಾಸಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ಸುಲಭದ ಮಾತು ಇದು ಅಲ್ಲವೇ ಅಲ್ಲ

ಮಂಗಳ ಗ್ರಹದ ಕೆಲವು ವಿಷಯಗಳು

ಮಂಗಳದಲ್ಲಿ ಒಂದು ದಿನ ಎಷ್ಟು ಉದ್ದ

ಭೂಮಿಯಲ್ಲಿ ಒಂದು ದಿನ 24 ಗಂಟೆಗಳಿದ್ದರೆ, ಮಂಗಳದಲ್ಲಿ ಒಂದು ದಿನ ಸುಮಾರು 24 ಗಂಟೆ 37 ನಿಮಿಷಗಳಿರುತ್ತದೆ. ಇದರಿಂದ ಮಾನವರ ದೈನಂದಿನ ಜೀವನಕ್ಕೆ ಹೊಂದಿಕೊಳ್ಳುವುದು ತುಸು ಸುಲಭವಾಗಬಹುದು.

ಮಂಗಳದಲ್ಲಿ ಉಸಿರಾಡಲು ಸಾಧ್ಯವಿಲ್ಲ

ಆಮ್ಲಜನಕ ಬಹಳ ಕಡಿಮೆ ಪ್ರಮಾಣದಲ್ಲಿದೆ.ಮಂಗಳದಲ್ಲಿ ಬದುಕಲು ಕೃತಕ ಆಮ್ಲಜನಕ ವ್ಯವಸ್ಥೆಗಳು ಅಗತ್ಯವಾಗುತ್ತವೆ.95% ಕಾರ್ಬನ್ ಡೈಆಕ್ಸೈಡ್ ಇದೆ

ನೀರಿನ ಲಭ್ಯತೆ ಹೇಗಿದೆ?

ಮಂಗಳದಲ್ಲಿ ಹಿಮ ರೂಪದಲ್ಲಿ ನೀರಿನ ಗುರುತುಗಳು ಪತ್ತೆಯಾಗಿವೆ ದ್ರವರೂಪದ ನೀರು ಅಲ್ಲಿ ಪತ್ತೆಯಾಗಿಲ್ಲ. ಕುಡಿಯುವ ನೀರು ಹಾಗೂ ಆಮ್ಲಜನಕ ಉತ್ಪಾದಿಸಲು ಬಳಸುವ ಸಾಧ್ಯತೆಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ.

ಮಂಗಳ ತಲುಪಲು ಎಷ್ಟು ಸಮಯ ಬೇಕು?

ಸುಮಾರು 6 ರಿಂದ 9 ತಿಂಗಳುಗಳ ಕಾಲ ಭೂಮಿಯಿಂದ ಮಂಗಳ ಗ್ರಹಕ್ಕೆ ಹೋಗಲು ಇಷ್ಟು ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ

ಚಳಿ ದೊಡ್ಡ ಸವಾಲು

ಸುಮಾರು -63 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಇದು -125 ಡಿಗ್ರಿವರೆಗೆ ಇಳಿಯಬಹುದು. ಇಂತಹ ತೀವ್ರ ಚಳಿಯಲ್ಲಿ ಬದುಕಲು ವಿಶೇಷ ರಕ್ಷಣಾತ್ಮಕ ವಸತಿ ವ್ಯವಸ್ಥೆಗಳು ಬೇಕಾಗುತ್ತವೆ.

ಮಂಗಳದಲ್ಲಿ ಜೀವಿಗಳಿವೆಯೇ?

ಹಿಂದೆ ಅಲ್ಲಿ ನೀರು ಹರಿದಿರುವ ಗುರುತುಗಳು ಕಂಡುಬಂದಿರುವುದರಿಂದ ಸೂಕ್ಷ್ಮ ಜೀವಿಗಳು ಇದ್ದಿರಬಹುದೆಂದು ವಿಜ್ಞಾನಿಗಳು ಊಹಿಸುತ್ತಿದ್ದಾರೆ.ಆದರೆ ಇದುವರೆಗೆ ಮಂಗಳದಲ್ಲಿ ಜೀವಿಗಳಿರುವುದಕ್ಕೆ ಯಾವುದೇ ಖಚಿತ ಸಾಕ್ಷ್ಯ ಸಿಕ್ಕಿಲ್ಲ

ಮಂಗಳದ ಧೂಳು ಏಕೆ ಅಪಾಯಕಾರಿ

ಆಗಾಗ್ಗೆ ದೊಡ್ಡ ಧೂಳಿನ ಬಿರುಗಾಳಿಗಳು ಸಂಭವಿಸುತ್ತವೆ. ಈ ಧೂಳು ಅತ್ಯಂತ ಸೂಕ್ಷ್ಮ ಕಣಗಳಿಂದ ಕೂಡಿದ್ದು, ಯಂತ್ರೋಪಕರಣಗಳು ಮತ್ತು ವಸತಿ ವ್ಯವಸ್ಥೆಗಳಿಗೆ ಹಾನಿ ಉಂಟುಮಾಡಬಹುದು. ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ

ಇಂಟರ್ನೆಟ್ ಬಳಸಲು ಸಾಧ್ಯವೇ?

ವಿಜ್ಞಾನಿಗಳು ಮಂಗಳಕ್ಕಾಗಿ ವಿಶೇಷ ಸಂವಹನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಏಕೆಂದರೆ ಮಂಗಳದಿಂದ ಭೂಮಿಗೆ ಸಂದೇಶ ಕಳುಹಿಸಲು 5 ರಿಂದ 20 ನಿಮಿಷಗಳವರೆಗೆ ಸಮಯ ತೆಗೆದುಕೊಳ್ಳಬಹುದು. ಆದ್ದರಿಂದ ಭೂಮಿಯಲ್ಲಿರುವಂತೆ ತಕ್ಷಣದ ಇಂಟರ್ನೆಟ್ ಸೇವೆ ಅಥವಾ ವಿಡಿಯೋ ಕರೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

ಕೃಷಿ ಮಾಡಲು ಸಾಧ್ಯವೇ?

ಮಾನವರು ಬದುಕಬೇಕಾದರೆ ಆಹಾರ ಉತ್ಪಾದನೆ ಅತ್ಯಗತ್ಯ. ಅದಕ್ಕಾಗಿ ವಿಜ್ಞಾನಿಗಳು ಮಂಗಳದ ಮಣ್ಣಿನಲ್ಲಿ ಬೆಳೆ ಬೆಳೆಯುವ ಸಾಧ್ಯತೆಗಳ ಕುರಿತು ಪ್ರಯೋಗಗಳನ್ನು ನಡೆಸುತ್ತಿದ್ದಾರೆ.

ಕುತೂಹಲಕಾರಿ ಸಂಗತಿ

ಆದ್ದರಿಂದ ಭೂಮಿಯಲ್ಲಿ 70 ಕೆಜಿ ತೂಕವಿರುವ ವ್ಯಕ್ತಿ ಮಂಗಳದಲ್ಲಿ ಸುಮಾರು 27 ಕೆಜಿ ತೂಕದಂತೆ ಅನುಭವಿಸುತ್ತಾನೆ. ಕಾರಣ ಮಂಗಳದಲ್ಲಿ ಗುರುತ್ವಾಕರ್ಷಣ ಶಕ್ತಿ ಭೂಮಿಗಿಂತ ಕಡಿಮೆ ಇದೆ ಇದೇ ಕಾರಣಕ್ಕೆ ಮಂಗಳದಲ್ಲಿ ನಡೆಯುವುದು ಮತ್ತು ಜಿಗಿಯುವುದು ಭೂಮಿಗಿಂತ ವಿಭಿನ್ನ ಅನುಭವವಾಗಿರುತ್ತದೆ.

ಮಂಗಳದಲ್ಲಿ ಶಾಶ್ವತವಾಗಿ ಮನುಷ್ಯರು ಬದುಕುವ ದಿನ ಇನ್ನೂ ದೂರವಿದ್ದರೂ,ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯಿಂದ ಅದು ಒಂದು ದಿನ ವಾಸ್ತವವಾಗುವ ಸಾಧ್ಯತೆ ಇದೆ.

Leave a Comment