Telegram Join My Telegram   WhatsApp Join My WhatsApp

ಹೋಟೆಲ್ ಸ್ಟೈಲ್ ಗರಿ ಗರಿಯಾದ ಮಸಾಲೆ ದೋಸೆ ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ

ಮನೆಯಲ್ಲೇ ಹೋಟೆಲ್ ಸ್ಟೈಲ್ ಕ್ರಿಸ್ಪಿ ಮಸಾಲೆ ದೋಸೆ ಮಾಡುವ ಸುಲಭ ವಿಧಾನ ಇಲ್ಲಿದೆ. ದೋಸೆ ಹಿಟ್ಟು, ಕೆಂಪು ಚಟ್ನಿ. ಮಸಾಲೆ ಪಲ್ಯ ಮತ್ತು ಟೇಸ್ಟಿ ಟಿಪ್ಸ್‌ಗಳೊಂದಿಗೆ ಸಂಪೂರ್ಣ ರೆಸಿಪಿ

ಬೇಕಾಗುವ ಸಾಮಗ್ರಿಗಳು

ದೋಸೆ ಹಿಟ್ಟಿಗೆ

ಅಕ್ಕಿ – 3 ಕಪ್

ಉದ್ದಿನ ಬೇಳೆ – 1 ಕಪ್

ಮೆಂತ್ಯ – 1 ಟೀ ಸ್ಪೂನ್

ಅವಲಕ್ಕಿ – ½ ಕಪ್

ಉಪ್ಪು – ರುಚಿಗೆ ತಕ್ಕಷ್ಟು

ಮಸಾಲೆ ಪಲ್ಯಕ್ಕೆ

ಆಲೂಗಡ್ಡೆ – 4

ಈರುಳ್ಳಿ – 2

ಹಸಿಮೆಣಸು – 3

ಕರಿಬೇವು – ಸ್ವಲ್ಪ

ಸಾಸಿವೆ – 1 ಟೀ ಸ್ಪೂನ್

ಅರಿಶಿನ – ¼ ಟೀ ಸ್ಪೂನ್

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ ಅಥವಾ ಬೆಣ್ಣೆ – ಬೇಕಾದಷ್ಟು

ಕೆಂಪು ಚಟ್ನಿ

ಒಣ ಕೆಂಪು ಮೆಣಸಿನಕಾಯಿ – 8 ರಿಂದ 10

ಬೆಳ್ಳುಳ್ಳಿ – 5 ಕಡಿ

ಹುರಿದ ಕಡಲೆ – 2 ಟೇಬಲ್ ಸ್ಪೂನ್

ಈರುಳ್ಳಿ – 1 ಸಣ್ಣದು

ಹುಣಸೆಹಣ್ಣು – ಸಣ್ಣ ತುಂಡು

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – 1 ಟೀ ಸ್ಪೂನ್

ನೀರು – ಅಗತ್ಯವಷ್ಟು

ಕಡಲೇ ಬೇಳೆ -2 ಸ್ಪೂನ್

ಕೆಂಪು ಚಟ್ನಿ

ಒಣ ಕೆಂಪು ಮೆಣಸಿನಕಾಯಿ – 8 ರಿಂದ 10

ಬೆಳ್ಳುಳ್ಳಿ – 5 ಕಡಿ

ಹುರಿದ ಕಡಲೆ – 2 ಟೇಬಲ್ ಸ್ಪೂನ್

ಈರುಳ್ಳಿ – 1 ಸಣ್ಣದು

ಹುಣಸೆಹಣ್ಣು – ಸಣ್ಣ ತುಂಡು

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – 1 ಟೀ ಸ್ಪೂನ್

ನೀರು – ಅಗತ್ಯವಷ್ಟು

ದೋಸೆ ಹಿಟ್ಟು ತಯಾರಿಸುವ ವಿಧಾನ

ಮೊದಲು ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತ್ಯವನ್ನು 5 ರಿಂದ 6 ಗಂಟೆಗಳ ಕಾಲ ನೆನೆಸಿಡಿ. ನಂತರ ಅವಲಕ್ಕಿಯನ್ನು 15 ನಿಮಿಷ ಬೇರೆ ನೆನೆಸಿಡಿ. ಎಲ್ಲವನ್ನೂ ಸೇರಿಸಿ ಮೃದುವಾಗಿ ರುಬ್ಬಿ. ಬಳಿಕ ಉಪ್ಪು ಹಾಕಿ ರಾತ್ರಿ ಪೂರ್ತಿ ಅಥವಾ ಕನಿಷ್ಠ 8 ಗಂಟೆಗಳ ಕಾಲ ಫರ್ಮೆಂಟ್ ಆಗಲು ಬಿಡಿ.

ಮಸಾಲೆ ಪಲ್ಯ ಮಾಡುವ ವಿಧಾನ

ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ ಮ್ಯಾಶ್ ಮಾಡಿ. ಪಾತ್ರೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಮತ್ತು ಹಸಿಮೆಣಸು ಹಾಕಿ ಒಗ್ಗರಣೆ ಮಾಡಿ. ನಂತರ ಈರುಳ್ಳಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಅರಿಶಿನ, ಉಪ್ಪು ಮತ್ತು ಆಲೂಗಡ್ಡೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಕೆಂಪು ಚಟ್ನಿ ಮಾಡುವ ವಿಧಾನ

ಮೊದಲು ಕೆಂಪು ಮೆಣಸಿನಕಾಯಿಯನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿಡಿ. ನಂತರ ಮಿಕ್ಸಿ ಜಾರಿನಲ್ಲಿ ನೆನೆಸಿದ ಮೆಣಸಿನಕಾಯಿ, ಬೆಳ್ಳುಳ್ಳಿ, ಹುರಿದ ಕಡಲೆ, ಈರುಳ್ಳಿ, ಹುಣಸೆಹಣ್ಣು ಮತ್ತು ಉಪ್ಪು ಹಾಕಿ.

ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ನಂತರ ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಈ ಮಿಶ್ರಣವನ್ನು 2 ನಿಮಿಷ ಹುರಿದರೆ ಹೋಟೆಲ್ ಸ್ಟೈಲ್ ಟೇಸ್ಟ್ ಬರುತ್ತದೆ.

ಹೋಟೆಲ್ ಸ್ಟೈಲ್ ದೋಸೆ ಮಾಡುವ ವಿಧಾನ

ಬಿಸಿ ತವೆಯ ಮೇಲೆ ಹಿಟ್ಟನ್ನು ತೆಳುವಾಗಿ ಹರಡಿ. ದೋಸೆ ಅರ್ಧ ಬೇಯಿದಾಗ ಅದರ ಮೇಲ್ಭಾಗಕ್ಕೆ ಕೆಂಪು ಚಟ್ನಿಯನ್ನು ಸವರಿ. ನಂತರ ಬೆಣ್ಣೆ ಅಥವಾ ಎಣ್ಣೆ ಹಾಕಿ ಕ್ರಿಸ್ಪಿಯಾಗಿ ಬೇಯಿಸಿ. ಬಳಿಕ ಮಸಾಲೆ ಪಲ್ಯ ಹಾಕಿ ಮಡಚಿದರೆ ಸೂಪರ್ ಟೇಸ್ಟಿ ಮಸಾಲೆ ದೋಸೆ ರೆಡಿ.

ಹೋಟೆಲ್ ರುಚಿ ಬರಲು ಈ ಟಿಪ್ಸ್ ಫಾಲೋ ಮಾಡಿ

ಹಿಟ್ಟಿನಲ್ಲಿ ಸ್ವಲ್ಪ ಅವಲಕ್ಕಿ ಹಾಕಿದರೆ ದೋಸೆ ಹೆಚ್ಚು ಕ್ರಿಸ್ಪಿ ಆಗುತ್ತದೆ.

ತವೆಯನ್ನು ತುಂಬಾ ಬಿಸಿ ಮಾಡಬೇಡಿ.

ಬೆಣ್ಣೆ ಬಳಸಿದರೆ ಹೋಟೆಲ್ ಫ್ಲೇವರ್ ಬರುತ್ತದೆ.

ಚೆನ್ನಾಗಿ ಫರ್ಮೆಂಟ್ ಆದ ಹಿಟ್ಟಿನಿಂದ ದೋಸೆ ರುಚಿ ಹೆಚ್ಚುತ್ತದೆ.

ಹಿಟ್ಟನ್ನು ತೆಳುವಾಗಿ ರುಬ್ಬಿಕೊಳ್ಳಬೇಡಿ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ

Leave a Comment