Telegram Join My Telegram   WhatsApp Join My WhatsApp

ಭೂಮಿಯೊಳಗಿನ ಚಿನ್ನದ ಭಂಡಾರ: ಭೂಮಿಯೊಳಗಿನ ಚಿನ್ನ ಹೊರತೆಗೆದರೆ ಜಗತ್ತಿನ ಶ್ರೀಮಂತಿಕೆ ಬದಲಾಗುತ್ತದೆಯೇ?

ಸಾವಿರಾರು ವರ್ಷಗಳಿಂದ ಚಿನ್ನವನ್ನು ಸಂಪತ್ತಿನ ಸಂಕೇತವಾಗಿ ಪರಿಗಣಿಸಲಾಗಿದೆ.ಭೂಮಿಯ ಮೇಲೆ ಚಿನ್ನವು ಅತ್ಯಂತ ಬೆಲೆಬಾಳುವ ಲೋಹಗಳಲ್ಲಿ ಒಂದಾಗಿದೆ.ಕೈಗಾರಿಕೆಗಳಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನಮಾನವಿದೆ. ಆದರೆ ನೀವು ಎಂದಾದರೂ ಭೂಮಿಯೊಳಗೆ ಎಷ್ಟು ಚಿನ್ನ ಇರಬಹುದು ಎಂದು ಯೋಚಿಸಿದ್ದೀರಾ?

ಭೂಮಿಯ ಕೇಂದ್ರ ಭಾಗದಲ್ಲಿರುವ ಚಿನ್ನವನ್ನು ಹೊರತೆಗೆದು ಭೂಮಿಯ ಮೇಲ್ಮೈ ಮೇಲೆ ಹರಡಲು ಸಾಧ್ಯವಾದರೆ, ಇಡೀ ಭೂಮಿಯನ್ನು ಸುಮಾರು 50 ಸೆಂಟಿಮೀಟರ್ ದಪ್ಪದ ಚಿನ್ನದ ಪದರದಿಂದ ಮುಚ್ಚಬಹುದು ಎಂದು ಹೇಳಲಾಗುತ್ತದೆ.ವಿಜ್ಞಾನಿಗಳ ಸಂಶೋಧನೆಗಳ ಪ್ರಕಾರ, ಭೂಮಿಯ ಒಳಭಾಗದಲ್ಲಿ ನಾವು ಊಹಿಸಲೂ ಸಾಧ್ಯವಾಗದಷ್ಟು ಅಪಾರ ಪ್ರಮಾಣದ ಚಿನ್ನ ಅಡಗಿದೆ.

ಚಿನ್ನವನ್ನು ಹೊರತೆಗೆಲು ಸಾಧ್ಯವಿಲ್ಲ ಏಕೆ 

2.900 ಕಿಲೋಮೀಟರ್ಗಿಂತಲೂ ಹೆಚ್ಚಿನ ಆಳದಲ್ಲಿ ಭೂಮಿಯ ಕೇಂದ್ರ ಭಾಗವು ಇದೆ ಯಾವುದೇ ಗಣಿಗಾರಿಕೆಯನ್ನು ಮಾನವರು ಇಷ್ಟು ಅಳಕ್ಕೆ ನಡೆಸಿಲ್ಲ ಇಷ್ಟೊಂದು ಆಳಕ್ಕೆ ಹೋಗುತ್ತಿದ್ದಂತೆ ಭೂಮಿಯ ಉಷ್ಣಾಂಶ ಹೆಚ್ಚಾಗುತ್ತದೆ ಭೂಮಿಯ ಕೇಂದ್ರ ಭಾಗದ ತಾಪಮಾನವು ಸೂರ್ಯನ ಮೇಲ್ಮೈ ತಾಪಮಾನಕ್ಕೆ ಸಮಾನವಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಆದ್ದರಿಂದ ಪ್ರಸ್ತುತ ತಂತ್ರಜ್ಞಾನದಿಂದ ಈ ಚಿನ್ನವನ್ನು ಹೊರತೆಗೆದು ಬಳಸುವುದು ಅಸಾಧ್ಯವಾಗಿದೆ.

ಚಿನ್ನ ಹೇಗೆ ಭೂಮಿಯ ಕೇಂದ್ರ ಭಾಗದಲ್ಲಿ ಸೇರಿತು 

ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಭೂಮಿ ರೂಪುಗೊಳ್ಳುವ ಸಂದರ್ಭದಲ್ಲಿ ಭಾರವಾದ ಲೋಹಗಳು ಭೂಮಿಯ ಕೇಂದ್ರದ ಕಡೆಗೆ ಮುಳುಗಿದವು. ಚಿನ್ನ, ಪ್ಲಾಟಿನಂ ಮತ್ತು ಇತರ ಭಾರವಾದ ಲೋಹಗಳು ಈ ಪ್ರಕ್ರಿಯೆಯಲ್ಲಿ ಭೂಮಿಯ ಒಳಭಾಗಕ್ಕೆ ಸಾಗಿದವು ಎಂದು ವಿಜ್ಞಾನಿಗಳು ನಂಬಿದ್ದಾರೆ. ಈ ಕಾರಣಕ್ಕಾಗಿ ಚಿನ್ನವೂ ಮನುಷ್ಯರಿಗೆ ತಲುಪಲಾಗದಷ್ಟು ಆಳದಲ್ಲಿ ಅಡಗಿದೆ

ವಿಜ್ಞಾನ ಪ್ರಿಯರನ್ನು ಸೆಳೆಯುತ್ತಿರುವ ಮಾಹಿತಿ

ಭೂಮಿಯೊಳಗೆ ಅಡಗಿರುವ ಈ ಚಿನ್ನದ ರಹಸ್ಯವು ವಿಜ್ಞಾನ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಷಯ ವೈರಲ್ ಆಗುತ್ತಿದ್ದು, ಲಕ್ಷಾಂತರ ಜನರು ಇದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.ನಮ್ಮ ಗ್ರಹದ ಒಳಭಾಗದಲ್ಲಿ ಇನ್ನೂ ಅನೇಕ ರಹಸ್ಯಗಳು ಅಡಗಿವೆ ಎಂಬುದನ್ನು ಈ ಮಾಹಿತಿ ಮತ್ತೊಮ್ಮೆ ಸಾಬೀತುಪಡಿಸುತ್ತದೆ.

ಭವಿಷ್ಯದಲ್ಲಿ ಈ ಚಿನ್ನವನ್ನು ಪಡೆಯಲು ಸಾಧ್ಯವಾಗುತ್ತದೆಯೇ?

ತಂತ್ರಜ್ಞಾನವು ದಿನದಿಂದ ದಿನಕ್ಕೆ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಒಂದು ಕಾಲದಲ್ಲಿ ಚಂದ್ರನ ಮೇಲೆ ಕಾಲಿಡುವುದು ಅಸಾಧ್ಯವೆಂದು ಭಾವಿಸಲಾಗಿತ್ತು. ಆದರೆ ಇಂದು ಮಾನವರು ಚಂದ್ರನ ಮೇಲೆ ಯಶಸ್ವಿಯಾಗಿ ಕಾಲಿಟ್ಟು, ಮಂಗಳ ಗ್ರಹದತ್ತಲೂ ಸಂಶೋಧನೆ ನಡೆಸುತ್ತಿದ್ದಾರೆ.

Leave a Comment