Telegram Join My Telegram   WhatsApp Join My WhatsApp

Toxic ಬಗ್ಗೆ ದೊಡ್ಡ ಅಪ್‌ಡೇಟ್:ಬಿಡುಗಡೆ ದಿನಾಂಕ ಅಧಿಕೃತ

ಅತ್ಯಂತ ಬಹು ನಿರೀಕ್ಷಿತ ಭಾರತೀಯ ಸಿನಿಮಾಗಳಲ್ಲಿ ಒಂದಾದ ‘Toxic: A Fairy Tale for Grown-Ups’ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.

Toxic ಸಿನಿಮಾ 2026ರ ಆಗಸ್ಟ್ 26 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಸಾಮಾಜಿಕ ಜಾಲತಾಣಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಚಿತ್ರದ ಬಿಡುಗಡೆಯ ದಿನಾಂಕವನ್ನು ದೃಢಪಡಿಸಿದ್ದಾರೆ. ಇದೀಗ ಈ ಸುದ್ದಿಯು ಯಶ್ ರವರ ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದೆ.

ಹಲವು ತಿಂಗಳುಗಳಿಂದ ಚಿತ್ರದ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳಿಗೆ ಇದರಿಂದ ತೆರೆ ಬಿದ್ದಿದೆ.ಯಶ್ ಅವರ ಹೊಸ ಅವತಾರ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.KGF ಮತ್ತು KGF Chapter 2 ಚಿತ್ರದ ಭಾರೀ ಯಶಸ್ಸಿನ ಬಳಿಕ ಯಶ್ ಅಭಿನಯಿಸುತ್ತಿರುವ ಮೊದಲ ದೊಡ್ಡ ಸಿನಿಮಾ.ಇದಾಗಿದ್ದು Toxic ಚಿತ್ರದ ಮೇಲೆ ದೇಶಾದ್ಯಂತ ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲೂ ಅಪಾರ ನಿರೀಕ್ಷೆ ನಿರ್ಮಾಣವಾಗಿದೆ.

ತಮ್ಮ ವಿಭಿನ್ನ ಕಥಾಹಂದರ ಮತ್ತು ವಿಶಿಷ್ಟ ಚಿತ್ರಕಥೆಗಾಗಿ ಹೆಸರುವಾಸಿಯಾಗಿರುವ ಗೀತು ಮೋಹನದಾಸ್ ರವರು ಈ ಚಿತ್ರದ ನಿರ್ದೇಶಕಿ

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಹಾಗೂ ಹುಮಾ ಖುರೇಷಿ ಯಶ್ ಜೊತೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕ್ಕೊಂಡಿದ್ದು.ವಿವಿಧ ಭಾಷಾ ಪ್ರೇಕ್ಷಕರಿಂದಲೂ ಹೆಚ್ಚಿನ ಬೆಂಬಲ ಸಿಗುವ ನಿರೀಕ್ಷೆ ಇದೆ.

Toxic ಸಿನಿಮಾ ಅತ್ಯಾಧುನಿಕ ತಂತ್ರಜ್ಞಾನ, ಭವ್ಯ ಸೆಟ್‌ಗಳು ಮತ್ತು ಅಂತರರಾಷ್ಟ್ರೀಯ ಮಟ್ಟದ ನಿರ್ಮಾಣ ಗುಣಮಟ್ಟವನ್ನು ಹೊಂದಿರಲಿದೆ ಎನ್ನಲಾಗಿದೆ.ಆದರೆ ಚಿತ್ರದ ಕಥೆ, ಪಾತ್ರಗಳು ಹಾಗೂ ಇತರ ಪ್ರಮುಖ ವಿವರಗಳನ್ನು ಚಿತ್ರತಂಡ ಇನ್ನೂ ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ.

1947ರಿಂದ 1961ರವರೆಗಿನ ಗೋವಾದ ಅಶಾಂತ ಕಾಲಘಟ್ಟವನ್ನು ಹಿನ್ನೆಲೆಯಾಗಿ ಹೊಂದಿರುವ ಈ ಆಕ್ಷನ್-ಥ್ರಿಲ್ಲರ್ ಸಿನಿಮಾವು ಪ್ರೀತಿ, ಕುಟುಂಬ ಬಾಂಧವ್ಯ, ದ್ರೋಹ ಮತ್ತು ಸೇಡಿನ ತೀವ್ರ ಭಾವನೆಗಳನ್ನು ರೋಚಕ ಕಥಾಹಂದರದ ಮೂಲಕ ತೆರೆದಿಡುತ್ತದೆ.

ಹಲವು ಕಾರಣಗಳಿಂದ ಟಾಕ್ಸಿಕ್ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿತ್ತು . ಯಶ್ ರವರು ಸಿನಿಮಾದ ಬಿಡುಗಡೆ ದಿನಾಂಕವನ್ನು ತಮ್ಮ instagram ನಲ್ಲಿ ಹಂಚಿಕೊಂಡಿದ್ದು ಅವರ ಸಿನಿಮಾ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಅನೇಕ ಅಭಿಮಾನಿಗಳಿಗೆ ಸಂತೋಷವನ್ನುಂಟು ಮಾಡಿದೆ

Kgf 1 ಮತ್ತು kgf 2 ಸಿನಿಮಾದ ಬಹುದೊಡ್ಡ ಯಶಸ್ಸಿನ ನಂತರ ಯಶ್ ರವರ ಮೊದಲನೇ ಸಿನಿಮಾ ಇದಾಗಿದ್ದು ಇದರ ಮೇಲೆ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿದ್ದೆ

Toxic ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಹೊಸ ಅಧ್ಯಾಯ ಬರೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment