Telegram Join My Telegram   WhatsApp Join My WhatsApp

ಸಮುದ್ರದ ತಳದಲ್ಲೇ ಉಳಿದ ಟೈಟಾನಿಕ್ 114 ವರ್ಷಗಳಾದರೂ ಟೈಟಾನಿಕ್ ಹಡಗನ್ನು ಮೇಲಕ್ಕೆ ತರದಿರುವುದು ಏಕೆ?

ಅತ್ಯಂತ ದೊಡ್ಡ ಮಹಾ ದುರಂತಗಳಲ್ಲಿ ಟೈಟಾನಿಕ್ ಹಡಗು ಮುಳುಗಿದ್ದು ಒಂದು. ಟೈಟಾನಿಕ್ ಹಡಗು ತನ್ನ ಪಯಣವನ್ನು 10 ಏಪ್ರಿಲ್ 1912 ರಂದು ಇಂಗ್ಲೆಂಡ್‌ನ Southampton ನಿಂದ ಆರಂಭಿಸಿತು

14 ಏಪ್ರಿಲ್ 1912 ರಾತ್ರಿ ಸುಮಾರು 11:40ಕ್ಕೆ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ದೊಡ್ಡ ಹಿಮಗಡ್ಡೆಗೆ (Iceberg) ಡಿಕ್ಕಿ ಹೊಡೆದಿತು. ಹಡಗಿನ ಬದಿಯಲ್ಲಿ ಡಿಕ್ಕಿಯಿಂದ ಬಿರುಕುಗಳು ಉಂಟಾದವು.ಹಡಗು ನಿಧಾನವಾಗಿ ನೀರಿನಿಂದ ತುಂಬಿ ಕೊನೆಗೆ ಎರಡು ಭಾಗಗಳಾಗಿ ಒಡೆದು ಮುಳುಗಿತು.

ಸುಮಾರು 2,224 ಜನರು ಪ್ರಯಾಣಿಸುತ್ತಿದ್ದ ಈ ಹಡಗಿನಲ್ಲಿ 1,500 ಜನ ಸಾವನ್ನಪ್ಪಿದರು.700 ಜನ ಬದುಕುಳಿದರು.

114 ವರ್ಷಗಳಾದರೂ ಹಡಗನ್ನು ಮೇಲಕ್ಕೆ ತರದಿರುವುದು ಏಕೆ?

ಉತ್ತರ ಅಟ್ಲಾಂಟಿಕ್ ಸಮುದ್ರದ ಸುಮಾರು 3,800 ಮೀಟರ್ ಆಳದಲ್ಲಿ 114 ವರ್ಷಗಳ ನಂತರವೂ ಟೈಟಾನಿಕ್‌ನ ಅವಶೇಷಗಳು ಇವೆ. ಆದರೆ ದೈತ್ಯ ಈ ಹಡಗನ್ನು ಮೇಲಕ್ಕೆ ಎತ್ತದಿರಲು ಕೆಲವು ಪ್ರಮುಖ ಕಾರಣಗಳಿವೆ

1.ಹಡಗು ಇರುವ ಆಳವೇ ದೊಡ್ಡ ಸವಾಲು

ಹಡಗು 3,800 ಮೀಟರ್ ಆಳದಲ್ಲಿ ಇರುವ ಕಾರಣ ಅಲ್ಲಿನೀರಿನ ಒತ್ತಡ ಅತ್ಯಂತ ಭೀಕರವಾಗಿರುತ್ತದೆ. ಯಾವುದೇ ದೊಡ್ಡ ರಕ್ಷಣಾ ಕಾರ್ಯಾಚರಣೆ ನಡೆಸುವುದು ಅತ್ಯಂತ ಕಷ್ಟಕರವಾಗಿದೆ.

2.ಸಾವಿರಾರು ಕೋಟಿ ರೂಪಾಯಿ ವೆಚ್ಚ 

ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶೇಷ ಉಪಕರಣಗಳು ಟೈಟಾನಿಕ್ ಹಡಗನ್ನು ಮೇಲಕ್ಕೆ ತರುವ ಕಾರ್ಯಾಚರಣೆಗಾಗಿ ಬೇಕಾಗುತ್ತವೆ. ಇದಕ್ಕೆ ಬಿಲಿಯನ್‌ಗಟ್ಟಲೆ ಡಾಲರ್ ವೆಚ್ಚವಾಗುವ ಸಾಧ್ಯತೆ ಇದೆ.

3.ಹಡಗಿನ ಸ್ಥಿತಿ ತುಂಬಾ ದುರ್ಬಲವಾಗಿದೆ

ಸುಮಾರು ನೂರು ವರ್ಷಗಳಿಂದ ನೀರಿನಲ್ಲಿರುವ ಹಡಗು ತುಂಬಾನೆ ತುಕ್ಕು ಹಿಡಿದಿರುವ ಕಾರಣ ಅದನ್ನು ಮೇಲಕ್ಕೆ ಎತ್ತುವಾಗ ಹಡಗು ಒಡೆದು ಹೋಗುವ ಸಾಧ್ಯತೆ ಹೆಚ್ಚಿದೆ.

4.ಇದು ಒಂದು ಐತಿಹಾಸಿಕ ಸ್ಮಾರಕ

ಟೈಟಾನಿಕ್ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು ಆದ್ದರಿಂದ ಅನೇಕ ಇತಿಹಾಸಕಾರರು ಮತ್ತು ಕುಟುಂಬಸ್ಥರು ಈ ಸ್ಥಳವನ್ನು ಸಮುದ್ರದ ಸಮಾಧಿ ಹಾಗೂ ಸ್ಮಾರಕವಾಗಿ ಪರಿಗಣಿಸುತ್ತಾರೆ. ಹಡಗನ್ನು ಅಲ್ಲಿಂದ ತೆಗೆದುಹಾಕುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಇದೆ.

5.ಸಂಶೋಧನೆಗಾಗಿ ಹಾಗೆಯೇ ಉಳಿಸಲಾಗಿದೆ

ಸಮುದ್ರದ ಆಳದಲ್ಲಿ ಲೋಹ ಹೇಗೆ ಬದಲಾಗುತ್ತದೆ ಮತ್ತು ಪ್ರಕೃತಿ ಅವಶೇಷಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಲು ವಿಜ್ಞಾನಿಗಳು ಮತ್ತು ಸಮುದ್ರ ಸಂಶೋಧಕರು ಟೈಟಾನಿಕ್ ಅವಶೇಷಗಳನ್ನು ಅಧ್ಯಯನ ಮಾಡುತ್ತಿದ್ದಾರೆ ಆದ್ದರಿಂದ ಇದು ಮಹತ್ವದ ಅಧ್ಯಯನ ಕ್ಷೇತ್ರವಾಗಿದೆ.

ಆಸಕ್ತಿದಾಯಕ ಸಂಗತಿ

ಸಮುದ್ರದಲ್ಲಿರುವ ವಿಶೇಷ ಬ್ಯಾಕ್ಟೀರಿಯಾಗಳು ಟೈಟಾನಿಕ್‌ನ ಲೋಹವನ್ನು ನಿಧಾನವಾಗಿ ಕರಗಿಸುತ್ತಿವೆ. ಇದೇ ರೀತಿ ಮುಂದುವರಿದರೆ, ಮುಂದಿನ ಕೆಲವು ದಶಕಗಳಲ್ಲಿ ಟೈಟಾನಿಕ್ ಹಡಗಿನ ಬಹುಭಾಗ ಸಂಪೂರ್ಣವಾಗಿ ನಾಶವಾಗುವ ಸಾಧ್ಯತೆ ಇದೆ. ಎಂದೂ ಕೆಲ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ

ಒಮ್ಮೆ ವಿಶ್ವದ ಅತ್ಯಂತ ಐಷಾರಾಮಿ ಹಡಗು ಎಂದು ಹೆಸರಾದ ಟೈಟಾನಿಕ್ ಇಂದು ಸಮುದ್ರದ ಆಳದಲ್ಲಿ ಇತಿಹಾಸದ ಮೌನ ಸಾಕ್ಷಿಯಾಗಿ ಉಳಿದಿದೆ.

Leave a Comment