Telegram Join My Telegram   WhatsApp Join My WhatsApp

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ 10 ಆಹಾರಗಳನ್ನು ಸೇವಿಸುವ ಮೊದಲು ಒಮ್ಮೆ ಯೋಚಿಸಿ

ಬೆಳಗ್ಗೆ ನಾವು ಸೇವಿಸುವಂತಹ ಆಹಾರವೇ ನಮ್ಮ ದೇಹದ ಮಟ್ಟ ಜೀರ್ಣಕ್ರಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಮ್ಮ ದಿನದ ಆರಂಭ ಆರೋಗ್ಯಕರವಾಗಿರಬೇಕೆಂದರೆ ಬೆಳಿಗ್ಗೆ ನಾವು ಸೇವಿಸುವ ಆಹಾರದ ಬಗ್ಗೆ ಜಾಗರೂಕರಾಗಿರಬೇಕು.

ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಆಹಾರಗಳು ಯಾವುವು ಎಂಬುದನ್ನು ನೋಡೋಣ.

1.ಕಾಫಿ

ಕೆಲವರ ದಿನ ಪ್ರಾರಂಭವಾಗುವುದೇ ಈ ಕಾಫಿ ಟೀ ಕುಡಿಯುವುದರಿಂದ ಆದರೆ ಇದು ಗ್ಯಾಸ್ಟ್ರಿಕ್ ಆಸಿಡಿಟಿ ಹೆಚ್ಚಿಸಿ ಹೊಟ್ಟೆ ನೋವು ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.

2.ಖಾರದ ಆಹಾರಗಳು

ಅತಿಯಾದ ಕಾರ್ಯವಿರುವ ಅಂತಹ ಆಹಾರಗಳನ್ನು ಸೇವಿಸಬಾರದು ಯಾಕೆಂದರೆ ಹೊಟ್ಟೆ ಉರಿ ಮತ್ತು ಅಸ್ವಸ್ಥತೆಯನ್ನು ಉಂಟು ಮಾಡುತ್ತವೆ

3.ಸಿಹಿ ಪದಾರ್ಥಗಳು

ಹೆಚ್ಚಿನ ಸಿಹಿ ಪದಾರ್ಥಗಳನ್ನು ಬೆಳಗ್ಗೆ ಕಾಲಿ ಹೊಟ್ಟೆಗೆ ಸೇವಿಸಬಾರದು ಕಾರಣ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಏರಿಸಿ ನಂತರ ದಿಢೀರ್ ಕಡಿಮೆ ಮಾಡಬಹುದು.

4.ತಂಪು ಪಾನೀಯಗಳು

ಸಾಫ್ಟ್ ಡ್ರಿಂಕ್ಸ್ ಮತ್ತು ಕಾರ್ಬೊನೇಟೆಡ್ ಪಾನೀಯಗಳು ಹೊಟ್ಟೆಯ ಒಳಪದರಕ್ಕೆ ಕಿರಿಕಿರಿ ಉಂಟುಮಾಡಿ ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸಬಹುದು.

5.ಸಿಟ್ರಸ್ ಹಣ್ಣುಗಳು

ಆಸಿಡಿಟಿ ಮತ್ತು ಹೊಟ್ಟೆ ಉರಿ ತರುವಂತಹ ಕಿತ್ತಳೆ, ನಿಂಬೆ ಮತ್ತು ಮೊಸಂಬಿಯಂತಹ ಹಣ್ಣುಗಳನ್ನೂ ಸೇವಿಸಬಾರದು ಯಾಕಂದರೆ ಇವುಗಳಲ್ಲಿ ಆಮ್ಲಿಯತೆ ಹೆಚ್ಚಿರುತ್ತದೆ

6.ಮೊಸರು

ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಖಾಲಿ ಹೊಟ್ಟೆಯಲ್ಲಿರುವ ಆಮ್ಲದಿಂದ ಪರಿಣಾಮ ಕಳೆದುಕೊಳ್ಳುವ ಸಾಧ್ಯತೆ ಇದೆ.

7.ಟೊಮೇಟೊ

ಟೊಮೇಟೊದಲ್ಲಿರುವ ಕೆಲವು ಆಮ್ಲೀಯ ಅಂಶಗಳು ಹೊಟ್ಟೆಯ ಆಮ್ಲೀಯತೆಯನ್ನು ಹೆಚ್ಚಿಸಬಹುದು.

8.ಬೇಕರಿ ಪದಾರ್ಥಗಳು

ಇವುಗಳಲ್ಲಿ ಸಕ್ಕರೆ ಮತ್ತು ಈಸ್ಟ್ ಪ್ರಮಾಣ ಹೆಚ್ಚಿದ್ದು ಹೊಟ್ಟೆ ಉಬ್ಬರ ಹಾಗೂ ಅಸ್ವಸ್ಥತೆಗೆ ಕಾರಣವಾಗಬಹುದು.

9.ಎನರ್ಜಿ ಡ್ರಿಂಕ್ಸ್

ಕೆಫೀನ್ ಮತ್ತು ಸಕ್ಕರೆ ಹೆಚ್ಚಿರುವ ಕಾರಣ ಇವು ಆಸಿಡಿಟಿ ಹಾಗೂ ಹೃದಯ ಬಡಿತ ಹೆಚ್ಚಾಗುವಂತೆ ಮಾಡಬಹುದು.

10. ಎನರ್ಜಿ ಡ್ರಿಂಕ್ಸ್

ಕೆಫೀನ್ ಮತ್ತು ಸಕ್ಕರೆ ಹೆಚ್ಚಿರುವ ಕಾರಣ ಇವು ಆಸಿಡಿಟಿ ಹಾಗೂ ಹೃದಯ ಬಡಿತ ಹೆಚ್ಚಾಗುವಂತೆ ಮಾಡಬಹುದು.

ಬೆಳಿಗ್ಗೆ ಏನು ಕುಡಿಯುವುದು ಉತ್ತಮ

ದೇಹದ ವಿಷಕಾರಿ ಅಂಶಗಳು ಹೊರಹೋಗಲು ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ

ಆರೋಗ್ಯಕರ ಬೆಳಗಿನ ಉಪಾಹಾರದ ಉದಾಹರಣೆಗಳು

ರಾಗಿ ಮುದ್ದೆ ಅಥವಾ ರಾಗಿ ಗಂಜಿ

ಓಟ್ಸ್ ಮತ್ತು ಹಣ್ಣುಗಳು

ನೆನೆಸಿದ ಒಣದ್ರಾಕ್ಷಿ ಮತ್ತು ಬಾದಾಮಿ

ಮೊಳಕೆ ಬಂದ ಕಾಳುಗಳು

ಬೆಚ್ಚಗಿನ ನೀರು

ಪಪ್ಪಾಯಿ

ಗಮನಿಸಬೇಕಾದ ವಿಷಯ

ಒಂದು ಆಹಾರ ಕೆಲವರಿಗೆ ಸೂಕ್ತವಾಗಿದ್ದರೆ, ಇನ್ನೊಬ್ಬರಿಗೆ ಸಮಸ್ಯೆ ಉಂಟುಮಾಡಬಹುದು.ಪ್ರತಿಯೊಬ್ಬರ ದೇಹದ ಸ್ವಭಾವ ವಿಭಿನ್ನವಾಗಿರುತ್ತದೆ.ನಿರಂತರ ಆಸಿಡಿಟಿ, ಹೊಟ್ಟೆ ನೋವು ಅಥವಾ ಜೀರ್ಣಕ್ರಿಯೆಯ ತೊಂದರೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಖಾಲಿ ಹೊಟ್ಟೆಯಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ಯಾವುದನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಂಡರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು. ಸಣ್ಣ ಆಹಾರ ಪದ್ಧತಿ ಬದಲಾವಣೆಗಳೇ ದೊಡ್ಡ ಆರೋಗ್ಯ ಪ್ರಯೋಜನಗಳನ್ನು ನೀಡಬಹುದು.

Leave a Comment