Telegram Join My Telegram   WhatsApp Join My WhatsApp

NEET-UG 2026 ಲೀಕ್ ಕೇಸ್‌ ಗೆ ಹೊಸ ಟ್ವಿಸ್ಟ್:NEET ಲೀಕ್ ಪ್ರಕರಣದಲ್ಲಿ ಮತ್ತೊಂದು ದೊಡ್ಡ ಬಂಧನ

NEET-UG 2026 ಲೀಕ್ ಕೇಸ್‌ ಗೆ ಹೊಸ ಟ್ವಿಸ್ಟ್:NEET ಲೀಕ್ ಪ್ರಕರಣದಲ್ಲಿ ಮತ್ತೊಂದು ದೊಡ್ಡ ಬಂಧನ

ಭಾರತದ ಅತ್ಯಂತ ಪ್ರಮುಖ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET-UG 2026 ಮತ್ತೊಮ್ಮೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ CBI ಇದೀಗ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ಹೊಸ ತಿರುವು ಪಡೆದಿದೆ.

ಪುಣೆಯ ಉಪನ್ಯಾಸಕಿ ಮನಿಷಾ ಹವಾಲ್ದಾರ್ ಅವರು Physics ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಕೆಲ ಮಾಹಿತಿಗಳ ಪ್ರಕಾರ ಆರೋಪಿಸಲಾಗಿದೆ. ಇದರಲ್ಲಿ ಆಶ್ಚರ್ಯಕರ ಸಂಗತಿ ಏನೆಂದರೆ ಅವರು National Testing Agency (NTA) ನೇಮಿಸಿದ್ದ ತಜ್ಞರ ತಂಡದ ಸದಸ್ಯೆಯಾಗಿದ್ದರೆಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಈಗಾಗಲೇ ವಿದ್ಯಾರ್ಥಿಗಳಿಂದ ಮುಂಚಿತವಾಗಿ ಹಣ ಪಡೆದು ಪ್ರಶ್ನೆ ಪತ್ರಿಕೆಗಳನ್ನು ಹಂಚುತ್ತಿದ್ದ ಹಲವಾರು ಶಿಕ್ಷಕರು ಕೋಚಿಂಗ್ ಸೆಂಟರ್ ಗಳು ಮತ್ತು ಮಧ್ಯವರ್ತಿಗಳು ಕಾರ್ಯನಿರ್ವಹಿಸುತ್ತಿದ್ದುದಾಗಿ CBI ಅನುಮಾನ ವ್ಯಕ್ತಪಡಿಸಿದೆ.

ಪ್ರಕರಣದ ಗಂಭೀರತೆ ಇನ್ನಷ್ಟು ಹೆಚ್ಚಿದೆ ಕಾರಣ ಇದಕ್ಕೂ ಮೊದಲು Biology ಮತ್ತು Chemistry ಪ್ರಶ್ನೆಪತ್ರಿಕೆ ಲೀಕ್ ಪ್ರಕರಣಕ್ಕೂ ಸಂಬಂಧಿಸಿದಂತೆ ಕೆಲವು NTA ತಜ್ಞರನ್ನು ಬಂಧಿಸಲಾಗಿತ್ತು ಇದೀಗ Physics ವಿಭಾಗಕ್ಕೂ ಲೀಕ್ ಸಂಪರ್ಕ ಪತ್ತೆಯಾಗಿರುವುದು.

ದೇಶಾದ್ಯಂತ ಈ ಘಟನೆಯು ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಆತಂಕ ಮೂಡಿಸಿದೆ ಸೋಶಿಯಲ್ ಮೀಡಿಯಾಗಳಲ್ಲಿ NEET  ಪರೀಕ್ಷೆಯ  ಭದ್ರತೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ “ದೇಶದ ಅತಿದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಯೇ ಸುರಕ್ಷಿತವಿಲ್ಲವೇ?” ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಕೇಳಿಬರುತ್ತಿದೆ.

CBI ಈ ತನಿಖೆಯನ್ನು ಇನ್ನಷ್ಟು ವಿಸ್ತರಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳು, ಬ್ಯಾಂಕ್ ವ್ಯವಹಾರಗಳು ಹಾಗೂ ಕೋಚಿಂಗ್ ನೆಟ್ವರ್ಕ್‌ಗಳ ಸಂಪರ್ಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Leave a Comment