Telegram Join My Telegram   WhatsApp Join My WhatsApp

ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ, ಗಣ್ಯರಿಂದ ಸಂತಾಪ

ಕರ್ನಾಟಕದ ಮಾಜಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಬಿಜೆಪಿ ನಾಯಕ ಬಿ.ಸಿ. ನಾಗೇಶ್(67) ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.ಕೆಲಕಾಲದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಬಿಜೆಪಿ ನಾಯಕರು ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಅವರ ಆರಂಭಿಕ ಜೀವನ 

ಬಿ.ಸಿ. ನಾಗೇಶ್ ಅವರ ಪೂರ್ಣ ಹೆಸರು ಬೆಲ್ಲೂರು ಚಂದ್ರಶೇಖರಯ್ಯ. ಇವರು 1959ರ ಜುಲೈ 1ರಂದು ತುಮಕೂರು ಜಿಲ್ಲೆಯಲ್ಲಿ ಜನಿಸಿದ್ದರು. ಅವರ ತಂದೆ ಬಿ.ಎಸ್. ಚಂದ್ರಶೇಖರಯ್ಯ ಮತ್ತು ತಾಯಿ ಬಿ.ಸಿ. ಸಾವಿತ್ರಮ್ಮ. ಅವರು ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಬೆಂಗಳೂರಿನ ಬಿ.ಎಂ.ಎಸ್. ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಚುನಾವಣಾ ಅಫಿಡವಿಟ್ ದಾಖಲೆಗಳಲ್ಲಿ ಅವರ ವೃತ್ತಿಪರ ಶಿಕ್ಷಣವಾಗಿ B.E. ಪದವಿ ಉಲ್ಲೇಖಿಸಲಾಗಿದೆ.

ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಅವರು, ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಜೊತೆಗೂ ಸಂಬಂಧ ಹೊಂದಿದ್ದರು ಎಂದು ಜೀವನಚರಿತ್ರೆ ಮೂಲಗಳು ತಿಳಿಸುತ್ತವೆ.

ರಾಜಕೀಯ ಜೀವನ ಆರಂಭ

1984ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆಯಾಗುವ ಮೂಲಕ ಅವರ ಸಕ್ರಿಯ ರಾಜಕೀಯ ಪಯಣ ಆರಂಭವಾಯಿತು. ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಹಲವು ವರ್ಷ ಕೆಲಸ ಮಾಡಿದ ಬಳಿಕ ಅವರು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು.ಮುಂದೆ ತಿಪಟೂರು ವಿಧಾನಸಭಾ ಕ್ಷೇತ್ರದಿಂದ 2008 ಮತ್ತು 2018ರಲ್ಲಿ ಶಾಸಕರಾಗಿ ಆಯ್ಕೆಯಾದ ಅವರು, 2021ರಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡರು.

ಶಿಕ್ಷಣ ಸಚಿವರಾಗಿ ಅವರ ಕೊಡುಗೆ 

ಶಿಕ್ಷಣ ಸಚಿವರಾಗಿ ಅವರು ಹಲವು ಕೆಲಸಗಳನ್ನು ಮಾಡಿದ್ದಾರೆ ಅದರಲ್ಲಿ

1. ‘ಕಲಿಕಾ ಚೇತರಿಕೆ’ ಕಾರ್ಯಕ್ರಮ

2. NEP 2020 ಜಾರಿಗೆ ಒತ್ತು

3. 400 ಶಾಲೆಗಳಲ್ಲಿ NEP ಪ್ರಾಯೋಗಿಕ ಜಾರಿ

4. ಶಾಲೆಗಳನ್ನು ಬೇಗನೆ ಆರಂಭಿಸಿ ಕಲಿಕಾ ನಷ್ಟ ಕಡಿಮೆ ಮಾಡುವ ಪ್ರಯತ್ನ

5. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಮಾದರಿ ಶಾಲೆಗಳ ಯೋಜನೆ

6. ಶಿಕ್ಷಕರ ನೇಮಕಾತಿಗೆ ಒತ್ತು

7. ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ

8. ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿ

9. ಹೊಸ ತರಗತಿ ಕೊಠಡಿಗಳ ನಿರ್ಮಾಣ

10. ಪಠ್ಯಪುಸ್ತಕ ಪರಿಷ್ಕರಣೆ

11. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ

12. ಪ್ರಾಥಮಿಕ ಶಿಕ್ಷಣದಲ್ಲಿ ಚಟುವಟಿಕೆ ಆಧಾರಿತ ಕಲಿಕೆ

ಬಿಸಿ ನಾಗೇಶ್ ರವರ ಅಗಲಿಕೆಗೆ ಗಣ್ಯರಿಂದ ಸಂತಾಪ 

ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್.ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು.ಬಿ.ವೈ. ವಿಜಯೇಂದ್ರ . ಬಸವರಾಜ ಬೊಮ್ಮಾಯಿ ಇನ್ನೂ ಅನೇಕ ಗಣ್ಯರು ಸಂತಾಪಕ ಸೂಚಿಸಿದ್ದಾರೆ

ಹೀಗೆ ಹಲವಾರು ಕೊಡುಗೆಗಳನ್ನು ಶಿಕ್ಷಣ ಸಚಿವರಾಗಿ ನೀಡಿದ್ದರು ಅವರು ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ ಆಗಸ್ಟ್ 18, 2026ರಂದು ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿರುವ ತಮ್ಮ ಮಗಳ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ

Leave a Comment