1991ರಲ್ಲಿ ತೆರೆಕಂಡಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಹತ್ವಾಕಾಂಕ್ಷೆಯ ‘ಶಾಂತಿ ಕ್ರಾಂತಿ’ ಸಿನಿಮಾ ಇದೀಗ ಮತ್ತೆ ಸುದ್ದಿಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ರೀ-ರಿಲೀಸ್ ಮಾಡಬೇಕು ಎಂಬ ಅಭಿಮಾನಿಗಳ ಬೇಡಿಕೆ ಜೋರಾಗಿದೆ.ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ ಸದ್ಯ ಬಂದಿರುವ ಹೊಸ ಮಾಹಿತಿಯ ಪ್ರಕಾರ, ಚಿತ್ರವನ್ನು ತಕ್ಷಣವೇ ಮರುಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎನ್ನಲಾಗಿದೆ.
ಶಾಂತಿ ಕ್ರಾಂತಿ ರಿಲೀಸ್ ಬಗ್ಗೆ ವೈರಲ್ ಆಗುತ್ತಿರುವುದೇಕೆ ?
ಇಂದಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬರುವ ಮುಂಚೆ ಹಲವು ವರ್ಷಗಳ ಹಿಂದೆ ಶಾಂತಿ ಕ್ರಾಂತಿ ಎಂಬ ಬಹು ಮೊತ್ತದ ಸಿನಿಮಾ ವನ್ನು ರವಿಚಂದ್ರನ್ ರವರು ಆಗಿನ ಸಮಯದಲ್ಲಿ 10 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಿದ್ದರು. ಈಗಿನ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದು ಮೂವಿ ಅನ್ನು ಹಲವು ಭಾಷೆಗಳಲ್ಲಿ ಡಬ್ ಮಾಡಲಾಗುತ್ತದೆ ಆದರೆ ಶಾಂತಿ ಕ್ರಾಂತಿ ಮೂವಿಯನ್ನು ಒಂದೇ ಸಿನಿಮಾ ಕಥೆಯನ್ನು ಮೂರು ಬಾರಿ ಚಿತ್ರಿಸಲಾಗಿತ್ತು. ಈ ಸಾಹಸ ಪ್ರಯತ್ನಕ್ಕೆ ಅಂದಿನ ದಿನಗಳಲ್ಲಿ ಯಶಸ್ಸು ಸಿಕ್ಕಿರಲಿಲ್ಲ ಆದರೆ ಇಂದಿನ ದಿನಗಳಲ್ಲಿ ಈ ಸಿನಿಮಾವನ್ನು Re release ಮಾಡಬೇಕೆಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹುದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ.
Re release ವಿಷಯಕ್ಕೆ ಸಂಬಂಧಿಸಿದಂತೆ ಬಾಲಾಜಿ ಯವರ ಅಪ್ಡೇಟ್
ಈಶ್ವರಿ ಪ್ರೊಡಕ್ಷನ್ಸ್ ಪರವಾಗಿ ಬಾಲಾಜಿ ವೀರಾಸ್ವಾಮಿ ನೀಡಿರುವ ಸ್ಪಷ್ಟನೆಯ ಪ್ರಕಾರ, ಚಿತ್ರದ ಮೂಲ ನೆಗೆಟಿವ್ ಮೆಲ್ಟ್ ಆಗಿದೆ. ಹೀಗಾಗಿ ಹಳೆಯ ನೆಗೆಟಿವ್ನಿಂದ ನೇರವಾಗಿ 4K ರೆಸ್ಟೋರೇಷನ್ ಮಾಡಿ ಚಿತ್ರವನ್ನು ಥಿಯೇಟರ್ಗೆ ತರಲು ಸಾಧ್ಯವಾಗುತ್ತಿಲ್ಲ. ಎಂದು ಸ್ಪಷ್ಟನೆ ನೀಡಿದ್ದಾರೆ
ರೀ-ರಿಲೀಸ್ಗೆ ಇನ್ನೂ ಸಾಕಷ್ಟು ಕೆಲಸ ಬೇಕು
ಶಾಂತಿ ಕ್ರಾಂತಿ ಸಿನಿಮಾವನ್ನು ಮತ್ತೆ ದೊಡ್ಡ ಪರದೆ ಮೇಲೆ ತರಬೇಕಾದರೆ ಹಲವು ತಾಂತ್ರಿಕ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಾಗುತ್ತದೆ. ಲಭ್ಯವಿರುವ ಮೂಲ ವಸ್ತುಗಳನ್ನು ಹುಡುಕುವುದು, ಅವುಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು, ಕಲರಿಂಗ್, ಸೌಂಡ್ ಮತ್ತು ಇತರೆ ಪೋಸ್ಟ್-ಪ್ರೊಡಕ್ಷನ್ ಕೆಲಸಗಳನ್ನು ಮಾಡಬೇಕಾಗಬಹುದು. ಈ ಎಲ್ಲ ಕೆಲಸಗಳನ್ನು ಮಾಡಲು 10 ತಿಂಗಳು ಬೇಕಾಗಬಹುದು ಎನ್ನಲಾಗುತ್ತಿದೆ.
‘ಶಾಂತಿ ಕ್ರಾಂತಿ’ ರೀ-ರಿಲೀಸ್ಗೆ ಯಾವುದೇ ತಕ್ಷಣದ ದಿನಾಂಕ ಘೋಷಣೆಯಾಗಿಲ್ಲ. ಮೂಲ ನೆಗೆಟಿವ್ ಸಮಸ್ಯೆ ಸೇರಿದಂತೆ ಹಲವು ತಾಂತ್ರಿಕ ಅಡೆತಡೆಗಳಿರುವುದರಿಂದ ತಕ್ಷಣ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇಲ್ಲ ಎಂಬುದು ಈಗಿನ ಸ್ಪಷ್ಟನೆ.
ಮುಂದೆ ರೀ-ರಿಲೀಸ್ ಆಗುತ್ತಾ?
ಚಿತ್ರವನ್ನು ಮರುಬಿಡುಗಡೆ ಮಾಡಲು ಬೇಕಾದ ಕೆಲಸಗಳು ಮತ್ತು ತಾಂತ್ರಿಕ ಸವಾಲುಗಳು ಇರುವುದರಿಂದ ಅಭಿಮಾನಿಗಳು ಇನ್ನಷ್ಟು ಸಮಯ ಕಾಯಬೇಕಾಗಬಹುದು.ಸದ್ಯದ ಮಾಹಿತಿಯ ಆಧಾರದ ಮೇಲೆ ‘ಶಾಂತಿ ಕ್ರಾಂತಿ’ ಶಾಶ್ವತವಾಗಿ ರೀ-ರಿಲೀಸ್ ಆಗುವುದಿಲ್ಲ ಎಂದು ಹೇಳಲಾಗುವುದಿಲ್ಲ
ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ
ಶಾಂತಿ ಕ್ರಾಂತಿ ಸಿನಿಮಾ ರಿಲೀಸ್ ಬಗ್ಗೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ ಕೆಲವರು ಸಿನಿಮಾ ರಿಲೀಸ್ ಗೆ ಕಾಯುತ್ತಿದ್ದಾರೆ ಇನ್ನು ಕೆಲವರು ಸಿನಿಮಾ ರಿಲೀಸ್ ಬೇಡ ಎಂದು ಹೇಳುತ್ತಿದ್ದಾರೆ ಕಾರಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಶಾಂತಿ ಕ್ರಾಂತಿ ಸಮಯ ಕಳೆದಂತೆ ಜನರು ಮರೆಯಬಹುದು ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಜನರು ಬೆಂಬಲಿಸುವಂತೆ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಬೆಂಬಲ ಕೊಡುತ್ತಾರೆ ಎಂಬಾ ಯಾವ ಗ್ಯಾರೆಂಟಿಯು ಇಲ್ಲ ಸಿನಿಮಾ ರಿ ರಿಲೀಸ್ ಮಾಡಲು ಕೂಡ ಲಕ್ಷಗಳ ಮೇಲೆ ವೆಚ್ಚವಾಗುತ್ತದೆ ಹಾಗಾಗಿ ಸಿನಿಮಾ ರಿಲೀಸ್ ಮಾಡಿದರು ಜನ ಸೋಶಿಯಲ್ ಮೀಡಿಯಾದಲ್ಲಿ ಬೆಂಬಲಿಸುವಂತೆ ಥಿಯೇಟರ್ ಗೆ ಬಂದು ಸಿನಿಮಾ ನೋಡುವುದಿಲ್ಲ ಎಂದು ಕೆಲವರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾ ಮುಖಾಂತರ ಹಂಚಿಕೊಳ್ಳುತ್ತಿದ್ದಾರೆ.