ದೇಶದ ಅತಿ ದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET-UG 2026 ಈ ಬಾರಿ ಮತ್ತೆ ವಿವಾದದಕ್ಕೆ ಗುರಿಯಾಗಿದೆ NTA ಪ್ರಶ್ನೆ ಪತ್ರಿಕೆಗಳ ಆರೋಪದ ನಂತರ ಮರು ಪರೀಕ್ಷೆ ನಡೆಸಲು ನಿರ್ಧರಿಸಿತು. ಲಕ್ಷಾಂತರ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯುವ ಪರಿಸ್ಥಿತಿ ಎದುರಾಯಿತು
ಆದರೆ ಕೆಲ ವಿದ್ಯಾರ್ಥಿಗಳು ಎರಡರಿಂದ ಮೂರು ನಿಮಿಷ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ಕಾರಣ ಅವರಿಗೆ ಪ್ರವೇಶ ಇದೆ ನಿರಾಕರಿಸಲಾಯಿತು.ಸಾರ್ವಜನಿಕರ ಗಮನ ಸೆಳೆದಿರುವ ಮರು ಪರೀಕ್ಷೆ ದಿನದ ಈ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದೆ
ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯ
ಮಳೆ ಟ್ರಾಫಿಕ್ ಇತರ ಕಾರಣಗಳಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ತಡವಾಯಿತು ಎಂದು ಅಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ
ಕೆಲವರು ಹೇಳುವಂತೆ ಶಿಸ್ತು ಮತ್ತು ಭದ್ರತೆ ಯಾವುದೇ ಪರೀಕ್ಷೆಯಲ್ಲಿ ಅತ್ಯಂತ ಮುಖ್ಯವಾದುದ್ದು ಸರಿಯಾದ ಸಮಯಕ್ಕೆ ಪರೀಕ್ಷೆಗೆ ಹಾಜರಾಗದಿರುವುದು ವಿದ್ಯಾರ್ಥಿಗಳ ತಪ್ಪು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ
ಇನ್ನೂ ಕೆಲವರು ಮೊದಲನೇ ಪರೀಕ್ಷೆಯಲ್ಲಿ ಪೇಪರ್ ಲೀಕ್ ಆದ ಕಾರಣ “ಪರೀಕ್ಷಾ ಸಂಸ್ಥೆಗೆ ಎರಡನೇ ಅವಕಾಶ ಸಿಗಬಹುದು ಎಂದಾದರೆ, ಕೇವಲ ಎರಡು ನಿಮಿಷ ತಡವಾದ ವಿದ್ಯಾರ್ಥಿಗಳಿಗೆ ಯಾಕೆ ಅವಕಾಶ ಸಿಗಬಾರದು?” ಎಂಬ ಪ್ರಶ್ನೆ ಅನೇಕರು ಕೇಳುತ್ತಿದ್ದಾರೆ.
ವಿದ್ಯಾರ್ಥಿಗಳ ಪರಿಶ್ರಮ, ಮಾನಸಿಕ ಒತ್ತಡ ಮತ್ತು ಭವಿಷ್ಯವನ್ನೂ ಪರಿಗಣಿಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಈ ಘಟನೆ ಶಿಕ್ಷಣ ವ್ಯವಸ್ಥೆಯಲ್ಲಿ ನಿಯಮ ಮತ್ತು ಮಾನವೀಯತೆ ನಡುವೆ ಸಮತೋಲನ ಹೇಗಿರಬೇಕು ಅನ್ನೋ ಹೊಸ ಚರ್ಚೆಗೆ ಕಾರಣವಾಗಿದೆ.
ಶಿಸ್ತು ಮತ್ತು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವುದರ ಜೊತೆಗೆ ವಿದ್ಯಾರ್ಥಿಗಳ ಕನಸು ಪರಿಶ್ರಮವು ಮುಖ್ಯವಾದದ್ದು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ
NTAಗೆ ಎರಡನೇ ಅವಕಾಶ ಸಿಕ್ಕಿರುವಾಗ, ಕೇವಲ 2 ನಿಮಿಷ ತಡವಾದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿರುವುದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ನಿಯಮಗಳ ಜೊತೆಗೆ ಮಾನವೀಯತೆಯೂ ಮುಖ್ಯವೇ ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿಬರುತ್ತಿದೆ.