Telegram Join My Telegram   WhatsApp Join My WhatsApp

Telegram ಮೇಲೆ ತಾತ್ಕಾಲಿಕ ನಿಷೇಧ ಸರ್ಕಾರದ ಮಹತ್ವದ ನಿರ್ಧಾರಕ್ಕೆ ಕಾರಣವೇನು ?

ಈ ಹಿಂದೆ ನಡೆದಂತಹ ನೀಟ್ ಎಕ್ಸಾಮ್ ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಎಕ್ಸಾಮ್ ಬರೆದಂತಹ ಹಲವು ವಿದ್ಯಾರ್ಥಿಗಳ ಪರಿಶ್ರಮವೆಲ್ಲ ವ್ಯರ್ಥವಾಗಿತ್ತು ಇದರಿಂದ ವಿದ್ಯಾರ್ಥಿಗಳ ಮತ್ತು ಜನರ ಟೀಕೆಗಳು ಕೋಪದ ಮಾತುಗಳನ್ನು ಸರ್ಕಾರ ಮತ್ತು ಎಕ್ಸಾಮ್ ಆಯೋಜಕರು ಎದುರಿಸಬೇಕಾಗಿತ್ತು.

ಮತ್ತೆ ಈ ತಪ್ಪು ಮರುಕಳಿಸಬಾರದೆಂದು ಸರ್ಕಾರವು ಕಠಿಣ ಕ್ರಮವೊಂದನ್ನು ತೆಗೆದುಕೊಂಡಿದೆ

Telegram ನ್ನು 22ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ

ಈ ಹಿಂದೆ NEET ಎಕ್ಸಾಮ್ paper ನ್ನೂ ಕೆಲವರು ಲಕ್ಷ ಲಕ್ಷ ಹಣ ಪಡೆದು ಟೆಲಿಗ್ರಾಂ ಚಾನೆಲ್ ಗಳ ಮೂಲಕ ಪೇಪರ್ ಗಳನ್ನು ಹಂಚಿದ್ದರು. ಎಂಬ ವದಂತಿ ಇದೆ.ಈ ಕಾರಣದಿಂದ ಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಈ ಕ್ರಮ ಕೈಗೊಂಡಿದೆ.

ಎಷ್ಟು ದಿನಗಳವರೆಗೆ ಟೆಲಿಗ್ರಾಂ ಬ್ಯಾನ್ 

ಸರ್ಕಾರವು 16 ಜೂನ್ ರಿಂದ 22 ಜೂನ್ ವರೆಗೆ Telegram ಅನ್ನು ಭಾರತದಲ್ಲಿ ನಿಷೇಧಿಸಲು ಮುಂದಾಗಿದೆ.

NEET ಮರುಪರೀಕ್ಷೆ ಯಾವಾಗ?

ದೇಶದ ವಿವಿಧ ಭಾಗಗಳ ಸಾವಿರಾರು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಲಿದ್ದು.NEET-UG 2026 ಮರುಪರೀಕ್ಷೆಯು ಜೂನ್ 21 ರಂದು ನಡೆಯಲಿದೆ ಪರೀಕ್ಷೆಯ ವೇಳೆ ಯಾವುದೇ ರೀತಿಯ ಅಕ್ರಮ ಅಥವಾ ಪ್ರಶ್ನೆಪತ್ರಿಕೆ ಸೋರಿಕೆ ನಡೆಯದಂತೆ ತಡೆಯುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ Telegram ಮೇಲಿನ ತಾತ್ಕಾಲಿಕ ನಿರ್ಬಂಧದ ಬಗ್ಗೆ ಕೆಲವರು ಸರ್ಕಾರದ ಕ್ರಮವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಸಾಮಾನ್ಯ ಬಳಕೆದಾರರಿಗೆ ತೊಂದರೆ ಉಂಟಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಪರೀಕ್ಷೆಯ ಪಾರದರ್ಶಕತೆ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ್ದಾಗಿದೆ.ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ವದಂತಿಗಳಿಗೆ ಕಿವಿಗೊಡದೆ ತಮ್ಮ ಓದಿನ ಮೇಲೆ ಗಮನ ಹರಿಸುವುದು ಉತ್ತಮ.

NEET-UG 2026 ಮರುಪರೀಕ್ಷೆಯ ಭದ್ರತೆಗಾಗಿ ಭಾರತ ಸರ್ಕಾರ Telegram ಮೇಲೆ 16 ಜೂನ್‌ನಿಂದ 22 ಜೂನ್‌ವರೆಗೆ ತಾತ್ಕಾಲಿಕ ನಿರ್ಬಂಧ ಹೇರಿದೆ. ನಕಲಿ ಪ್ರಶ್ನೆಪತ್ರಿಕೆಗಳು ಮತ್ತು ವಂಚನೆ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ

Leave a Comment